ಕರಾಚಿ- ಪಾಕಿಸ್ತಾನದಲ್ಲಿ ಹಿಂದೂಗಳನ್ನು ಪೀಡಿಸಲಾಗುತ್ತಿದೆ., ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುತ್ತಾರೆ, ಹಿಂದುಗಳು ಅಲ್ಲಿ ಅಲ್ಪ ಸಂಖ್ಯಾತರಾದರೂ ಕೂಡ ಸೂಕ್ತ ಸೌಲಭ್ಯಗಳನ್ನು ನೀಡದೇ ಅಸಡ್ಡೆ ಮೆರೆಯುತ್ತಿದೆ ಅಂತ ನಿರಂತರವಾಗಿ ಕೇಳಿ ಬರುತ್ತಿರುವ ಆರೋಪಗಳು.ಈಗ ಪಾಕಿಸ್ತಾನದ ಈ ಹಿಂದೂ ವಿರೋಧಿ ನೀತಿ ಮತ್ತೊಮ್ಮೆಜಗಜ್ಜಾಹೀರಾಗಿದೆ. ಪಾಕಿಸ್ತಾನದ ಕ್ರಿಕೆಟ್ ಆಟಗಾರ ದಿನೇಶ್ ಕನೇರಿಯಾ ತನಗಾದ ಅವಮಾನಗಳನ್ನು ಬಿಚ್ಚಿಟ್ಟಿದ್ದಾನೆ. ಪಾಕಿಸ್ತಾನದಲ್ಲಿ ಇಂತಹ ಧೋರಣೆಗಳು ಬೀಡುಬಿಟ್ಟಿವೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಲ್ಲಿಯೂ ಕೂಡ ಧರ್ಮ ತಾರತಮ್ಯ ಮಾಡುವ ಪರಿಪಾಠವಿದೆ ಅನ್ನೋದನ್ನು ಕನೇರಿಯಾ ಈ ಹಿಂದೆಯೂ ಹೇಳಿದ್ದರು.ಈಗ ಮತ್ತೊಮ್ಮೆ ಆ ವಿಚಾರದ ಬಗ್ಗೆಯೇ ಡ್ಯಾನೀಶ್ ಕನೇರಿಯಾ ಮಾತನಾಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಲ್ಲಿ ಇಂತಹ ಧೋರಣೆ ಇರೋದು ಮತ್ತೊಮ್ಮೆ ಸಾಬೀತಾಗಿದೆ.

ಕನೇರಿಯಾ 2010ರಲ್ಲಿ ಕೌಂಟಿ ಕ್ರಿಕೆಟ್ ಆಡುವ ವೇಳೆ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ನಿಷೇಧ ಶಿಕ್ಷೆಗೆ ಒಳಗಾಗಿದ್ರು. ಈ ಹಿಂದೂ ಆಟಗಾರನ ಮೇಲೆ ಹೇರಲಾಗಿದ್ದ ನಿಷೇಧವನ್ನು ಕಡಿಮೆಗೊಳಿಸುವ ಅಥವಾ ತೆರವು ಮಾಡುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪ್ರಯತ್ನಿಸಲೇ ಇಲ್ಲ. ನಾನು ಮತ್ತೆ ಪಾಕ್ ಪರ ಕ್ರಿಕೆಟ್ ಆಡಬೇಕು ನನ್ನ ಮೇಲಿರುವ ನಿಷೇಧ ಶಿಕ್ಷೆಯನ್ನು ಕಡಿಮೆಗೊಳಿಸಿ ಅಂತ ಕನೇರಿಯಾ ಪದೇ ಪದೇ ಕೇಳಿಕೊಳ್ಳುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ.
ಹೀಗಿರುವಾಗಲೇ ಈಗ ಪಾಕ್ ಆಟಗಾರ ಉಮರ್ ಅಕ್ಮಲ್, ಪಾಕಿಸ್ತಾನ ಕ್ರಿಕೆಟ್ ಲೀಗ್ ವೇಳೆ ಭ್ರಷ್ಚಾಚಾರ ಮಾಡಿದ್ದು ಮೂರು ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ರು. ಆದರೆ ಪಾಕ್ ಕ್ರಿಕೆಟ್ ಮಂಡಳಿ ಮುತುವರ್ಜಿ ವಹಿಸಿ ಈ ಶಿಕ್ಷೆಯನ್ನು ಒಂದೂವರೆ ವರ್ಷಕ್ಕೆ ಸೀಮಿತಗೊಳಿಸಿದೆ.

ಹಿಂದೆ, ವಿಶ್ವ ಮಟ್ಟದಲ್ಲಿ ಪಾಕಿಸ್ತಾನ ಫಿಕ್ಸಿಂಗ್ ನಲ್ಲಿ ತಲೆ ತಗ್ಗಿಸಿತ್ತು. ಮಹಮ್ಮದ್ ಅಮೀರ್, ಮಹಮ್ಮದ್ ಆಸೀಫ್ ಮತ್ತು ಸಲ್ಮಾನ್ ಬಟ್ ಕಳ್ಳಾಟ ಆಡಿ ಸಿಕ್ಕಿ ಹಾಕಿಕೊಂಡರು. ಇವರಿಗೂ ನಿಷೇಧ ಹೇರಲಾಗಿತ್ತು. ಆದರೆ ಈ ಆಟಗಾರರ ನಿಷೇಧ ಅವಧಿಯನ್ನು ಗಮನದಲ್ಲಿಟ್ಟುಕೊಂಡಿದ್ದ ಪಾಕಿಸ್ತಾನ, ಆ ಆಟಗಾರರಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಲೇ ಬಂತು,ನಿಷೇಧ ಶಿಕ್ಷೆ ಮುಗಿದ ಬೆನ್ನಲ್ಲೇ ಪಾಕ್ ಪರ ಮತ್ತು ದೇಶೀಯ ಟೂರ್ನಿಗಳಲ್ಲಿ ಆಡುವುದಕ್ಕೆ ಅವಕಾಶವನ್ನೂ ಕೂಡ ಮಾಡಿಕೊಡಲಾಯ್ತು.
ಆದರೆ ಪಾಕ್ ಪರ ಆಡಿರುವ ಎರಡನೇ ಹಿಂದೂ ಆಟಗಾರ ದಾನೀಶ್ ಕನೇರಿಯಾ ಮೇಲೆ ಮಾತ್ರ ಪಾಕ್ ಕ್ರಿಕೆಟ್ ಮಂಡಳಿಗೆ ಒಲವಿಲ್ಲ. ಆದ್ದರಿಂದಲೇ ಈಗ ಮತ್ತೆ ಕನೇರಿಯಾ ಮನಬಿಚ್ಚಿ ಮಾತನಾಡಿದ್ದು, ಪಾಕಿಸ್ತಾನದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಛೀ..ಥೂ ಅನ್ನುವಂತಾಗಿದೆ.