ಮಂಗಳೂರು: ಪೊಲೀಸರ ಎದುರೇ ಯುವಕನೊಬ್ಬ ವ್ಯಕ್ತಿಗೆ ಥಳಿಸಿರುವ ಘಟನೆ ಮಂಗಳೂರಿನ ಮಠದಕಣಿ ಬಳಿ ನಡೆದಿದೆ.. ನಗರದ ಅಶೋಕನಗರದ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮೇಲೆ ಕೋಟೆಕಾರಿನ ನಿವಾಸಿ ಮನೀಶ್ ಎಂಬಾತ ರಾಡ್‍ನಿಂದ ಹಲ್ಲೆ ನಡೆಸಿದ್ದಾನೆ.. ಅಲ್ಲದೇ ಪೊಲೀಸರ ಎದುರೇ ಪೋಸ್ಟ್ ಮ್ಯಾನ್ನ ಬೈಕ್‍ಗಳನ್ನು ಪುಡಿ ಮಾಡಿ ಪೋಸ್ಟ್ ಕಾಗದಗಳನ್ನು ಎಸೆದು ಗೂಂಡಾಗಿರಿ ಪ್ರದರ್ಶಿಸಿದ್ದಾನೆ..


ಸುಮಾರು 19 ವರ್ಷಗಳಿಂದ ಅಶೋಕ್‍ನಗರ ಪೋಸ್ಟ್ ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಎಂಬ ಪೋಸ್ಟ್ ಮ್ಯಾನ್ ಎಂದಿನಂತೆ ಕಾಗದಗಳನ್ನು ಬಟವಾಡೆ ಮಾಡಲು ಹೋದಾಗ ಈ ಘಟನೆ ನಡೆದಿದೆ.. ಮಠದಕಣಿ ನಿವಾಸಿ ಮನೀಶ್ ಎಂಬಾತನಿಗೆ ರಿಜಿಸ್ಟರ್ ಕಾಗದ ಬಂದಿತ್ತು.. ಅದನ್ನು ಕೊಡಲು ಹೋಗಿದ್ದಾಗ, ಮನೀಶ್ ಎಂಬಾತ ಪೋಸ್ಟ್ ಮ್ಯಾನ್ ದಿನೇಶ್‍ಗೆ ಕೆಟ್ಟ ಭಾಷೆ ಪ್ರಯೋಗಿಸಿ ಆತನ ಮೇಲೆ ರಾಡ್‍ನಿಂದ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ.. ಈ ವೇಳೆ ಪೋಸ್ಟ್ ಮ್ಯಾನ್ ದಿನೇಶ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಬಂದ ಪೊಲೀಸರು ಬಂದರೂ ಕೂಡ ಆರೋಪಿ ಮನೀಶ್ ಪೊಲೀಸರ ಎದುರೇ ಪೋಸ್ಟ್ ಮ್ಯಾನ್ರ ಬೈಕ್ ಜಖಂಗೊಳಿಸಿದ್ದಾನೆ.. ಇನ್ನು ಪೋಸ್ಟ್ ಮ್ಯಾನ್ ದಿನೇಶ್ ಬರ್ಕೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.. ಆದರೆ ಘಟನೆ ಏನು ಕಾರಣ ಅನ್ನೋದು ತನಿಖೆಯಿಂದ ಬಹಿರಂಗವಾಗಬೇಕಿದೆ.
