ಯಾರಿಗೆ ತನ್ನ ಮೇಲೆ ನಂಬಿಕೆ ಜ್ಞಾನ ಇರುತ್ತದೋ ಅವನು ಬದುಕಲ್ಲಿ ಭವಸಾಗರ ದಾಟಿ ದಡಮುಟ್ಟಿ ಬೇಕಿದ್ದ ಫಲಪಡೆಯುತ್ತಾನೆ. ಯಾರಿಗೆ ಬದುಕಲ್ಲಿ ತನ್ನಂಬಿಕೆ ಜ್ಞಾನ ಇರುವುದಿಲ್ಲವೋ ಅಂತವನು ಸದಾ ಅನ್ಯರು ದಡಮುಟ್ಟಿದ ಪ್ರಕ್ರಿಯೆ ಬಗ್ಗೆಯೇ ತರ್ಕವಿತಂಡ ವ್ಯಾಕರಣ ಮೀಮಾಂಸೆ ಲೆಕ್ಕ ಮಾಡುತ್ತಾ ದಡಮುಟ್ಟದೆ ಇರುವಲ್ಲೇ ಇದ್ದುಬಿಡುತ್ತಾನೆ.. ಇದು ಜಗತ್ ಸತ್ಯ ಅಂತ ಜಗ್ಗೇಶ್ ತಮ್ಮ ಸಾಮಾಜಿಕ ಜಾಲಜಾಣದಲ್ಲಿ ಬರೆದುಕೊಂಡಿದ್ದಾರೆ.

ತಮ್ಮಲ್ಲಿರುವ ನಂಬಿಕೆ, ಒಂದು ಕೆಲಸದೆಡೆಗಿನ ಮುನ್ನುಗ್ಗುವಿಕೆ, ನಿರಂತರವಾಗಿ ಶ್ರಮವಹಿಸಿ ದುಡಿಯುವುದು ಇತ್ಯಾದಿಯನ್ನು ಮಾಡುತ್ತಾ ಸಾಗಿದ್ರೆ,ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಗುರಿ ಮತ್ತು ಗುರಿಯತ್ತ ಸಾಗಲು ಬೇಕಾಗಿರುವ ಇಚ್ಛಾಶಕ್ತಿ. ಆದರೆ ಇನ್ಯಾರೋ ಸಾಧನೆ ಮಾಡಿದ್ರು. ಅವರು ಹೇಗೆ ಸಾಧನೆ ಮಾಡಲು ಸಾಧ್ಯ. ಆತ ಗುರಿ ಮುಟ್ಟಿರುವುದರಲ್ಲಿ ಏನೋ ಅನುಮಾನವಿದೆ. ಅದು ಸರಿಯಿಲ್ಲ, ಇದು ಸರಿಯಿಲ್ಲ, ಅವನಿಗೆ ಬ್ಯಾಕ್ ಗ್ರೌಂಡ್ ಇತ್ತು, ಇವನದ್ದು ಕಳ್ಳದಾರಿ ಅಂತ ಅನ್ಯರ ಸಾಧನೆ ಬಗ್ಗೆ ತರ್ಕ ಮಾಡುತ್ತಾ ಸುಮ್ಮನೆ ಟೈಮ್ ಪಾಸ್ ಮಾಡುವವರು, ಯಾವತ್ತೂ ಸಾಧಕನಾಗಲು ಸಾಧ್ಯವಿಲ್ಲ, ಇದು ಜಗತ್ ಸತ್ಯ ಅಂತ ನವರಸ ನಾಯಕ ಜಗ್ಗೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಮಾತುಗಳು ಅದೆಷ್ಟೋ ಅವರ ಅಭಿಮಾನಿಗಳಿಗೆ, ಯುವಕರಿಗೆ ಪ್ರೇರಕಶಕ್ತಿಯಾಗಬಲ್ಲದು. ಇದನ್ನು ಅರಿತು ನಡೆದರೇ ಬದುಕು ಬಂಗಾರವಾಗಬಹುದು.