ಮುಂಬೈ-ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅತ್ಮಹತ್ಯೆಯ ನಂತರ ಹಿಂದಿ ಚಿತ್ರರಂಗದ ಮೇಲೆ ಅನುಮಾನಗಳು ಹೆಚ್ಚಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಅಂತನೂ ಸಾಮಾಜಿಕ ಜಾಲ ತಾಣಗಳಲ್ಲಿ ವಾದ ಮಾಡುತ್ದಿದ್ದಾರೆ.
ಸುಶಾಂತ್ ಕೇಸ್ ಬಗ್ಗೆ ಖಾನ್ ಪ್ರತಿಕ್ರಿಯೆ ಯಾಕಿಲ್ಲ!
ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಭಾರತದ ಚಿತ್ರರಂಗ, ಸಿನಿಮಾ ಪ್ರಿಯರು ಮರುಗಿದರು. ಆದರೆ ಬಾಲಿವುಡ್ ನ ಸೂಪರ್ ಸ್ಟಾರ್ ಖಾನ್ ಗಳಾದ ಶಾರೂಖ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಯಾಕೆ ಯಾವುದೇ ಪ್ರತಿಕ್ರಿಯೆ ನೀಡದೇ, ಮೌನ ತಾಳಿದ್ದು ಯಾಕೆ ಅಂತ ರಾಜ್ಯ ಸಭೆ ಸದಸ್ಯ, ಹಿರಿಯ ವಾಗ್ಮಿ, ಚಿಂತಕ ಸುಬ್ರಮಣ್ಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಬಾಲಿವುಡ್ ಖಾನ್ ಆಸ್ತಿ ತನಿಖೆಯಾಗಲಿ!
ಅಮೀರ್,ಶಾರೂಖ್,ಸಲ್ಮಾನ್ ವಿರುದ್ಧ ಸ್ವಾಮಿ ಸಮರ!
ಸುಬ್ರಮಣ್ಯನ್ ಸ್ವಾಮಿಯವರು, ಶುಕ್ರವಾರ ರಾತ್ರಿಯ ಟ್ವೀಟ್ ನಲ್ಲಿ ಬಾಲಿವುಡ್ ಖಾನ್ ಗಳ ಮೌನವನ್ನು ಪ್ರಶ್ನಿಸಿದ್ದಾರೆ. ಆದರೆ ಇವತ್ತು ಈ ಮೂರು ಸೂಪರ್ ಸ್ಟಾರ್ ಖಾನ್ ಗಳು ಮಾಡಿರುವ ಆಸ್ತಿಗಳ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಭಾರತ ಮತ್ತು ದುಬೈನಲ್ಲಿ ಮಾಡಿರುವ ಆಸ್ತಿಗಳ ಬಗ್ಗೆ ತನಿಖೆಯಾಗಬೇಕಿದೆ ಎಂದು ಸ್ವಾಮಿ ಬರೆದುಕೊಂಡಿದ್ದಾರೆ.
ಇವರಿಗೆ ಯಾರೆಲ್ಲ ಬಂಗಲೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಎಷ್ಟೆಷ್ಟು ಆಸ್ತಿಯನ್ನು ಹೊಂದಿದ್ದಾರೆ.ಇಷ್ಟೇಲ್ಲ ಹೇಗೆ ಅವರು ಪಡೆದುಕೊಂಡರು ಅಂತ ತನಿಖೆ ನಡೆಸಬೇಕು. ಅದರಲ್ಲೂ ಎಸ್ ಐ ಟಿ, ಜಾರಿನಿರ್ದೇಶನಾಲಯ,ಸಿಬಿಐ ಮೂಲಕ ತನಿಖೆ ಮಾಡಿದರೇ ಎಲ್ಲವೂ ಕಾನೂನು ಬದ್ಧವಾಗಿದೆಯೇ ಎಂದು ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.

ಇಲ್ಲಿಯವರೆಗೆ ಯಾರೂ ಕೂಡ ಬಾಲಿವುಡ್ ಸೂಪರ್ ಸ್ಟಾರ್ ಗಳ ಆಸ್ತಿಯ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಅವರ ಮೇಲೂ ತನಿಖೆಯಾಗಲಿ ಅಂತ ದೊಡ್ಡ ಧ್ವನಿ ಮೊಳಗಿಸಿರಲಿಲ್ಲ. ಸ್ವಾಮಿಯವರ ಈ ಟ್ವೀಟ್ ಇವರ ಆಸ್ತಿಗಳ ತನಿಖೆ ಮಾಡಿಸುತ್ತಾ ಕಾದು ನೋಡಬೇಕು.