ಮುಂಬೈ: ಬಾಲಿವುಡ್ ನಟ, ಎಂ ಎಸ್ ಧೋನಿ ಜೀವನ ಚರಿತ್ರೆಯನ್ನು ಸಾರುವ ಚಿತ್ರ ಧೋನಿಯಲ್ಲಿ ನಾಯಕನಾಗಿ ನಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಗೆ 34ವರ್ಷ ವಯಸ್ಸಾಗಿತ್ತು.
ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಪತ್ತೆಯಾಗಿದೆ. ಇತ್ತೀಚಿಗಷ್ಟೇ ಸುಶಾಂತ್ ಸಿಂಗ್ ರವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಸಾವನ್ನಪ್ಪಿದ್ರು
ಸುಶಾಂತ್ ಸಿಂಗ್ ಧೋನಿ ಸಿನಿಮಾದ ನಟನೆಗಾಗಿ ಹಲವು ಪ್ರಶಸ್ತಿ ಪಡೆದಿದ್ರು. ಟಿವಿ ಶೋ, ಡ್ಯಾನ್ ಶೋ ಗಳಲ್ಲೂ ಕೂಡ ಸುಶಾಂತ್ ಸಿಂಗ್ ಮಿಂಚಿದ್ರು. ಯುವನಟನ ಆತ್ಮಹತ್ಯೆಗೆ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ