ಬೆಂಗಳೂರು- ಬಾಡಿ ಬಿಲ್ಡಿಂಗ್ ನಲ್ಲಿ ಎತ್ತಿದ ಕೈ, ನಟನೆಗೂ ಸೈ, ಡ್ಯಾನ್ಸ್ ಗೆ ಜೈ, ಬಿಗ್ ಬಾಸ್ ಮನೆಯಲ್ಲೂ ಹೇಳಿದ್ರೂ ಒಂದ್ಸಾರಿ ಹಾಯ್ ಹಾಯ್. ಇವರೇ ಬಿಗ್ ಬಾಸ್ ನ ಬಿಗ್ ಬಾಡಿ ಡಾ.ಎ.ವಿ.ರವಿ.

ಭಾರತದ ಬಾಡಿ ಬಿಲ್ಡಿಂಗ್ ತಂಡದ ಮಾಜಿ ನಾಯಕ, ಕೋಚ್ ಎಲ್ಲವೂ ಆಗಿದ್ದ ರವಿಯವರು ಈಗ ಕರ್ನಾಟಕದ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮತ್ತೊಂದು ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ರಾಜ್ಯದ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ನೆರವಿಗೆ ಮತ್ತು ಅಲ್ಲಿನ ಟ್ರೈನರ್ಸ್ ನ ನೆರವಿಗೆ ಅಂತಲೇ ಸಂಘ ಹುಟ್ಟಿಕೊಂಡಿದೆ. ಫಿಟ್ ನೆಸ್ ಕ್ಷೇತ್ರ ಮತ್ತು ಸರ್ಕಾರದೊಂದಿಗೆ ಸೇತುವೆಯಾಗಿರುವುದಕ್ಕಾಗಿ ಈ ಸಂಘವನ್ನು ರಚನೆ ಮಾಡಲಾಗಿದೆ.

ಸಂಘದ ಅಧ್ಯಕ್ಷರಾದ ಏಕಲವ್ಯ ಪ್ರಶಸ್ತಿ ವಿಜೇತ, ಭಾರತ ಶ್ರೀ, ಭಾರತ ಶ್ರೇಷ್ಠ ಪ್ರಶಸ್ತಿಗಳನ್ನೂ ಪಡೆದಿರುವ, ನ್ಯಾಚುರಲ್ ಬಾಡಿಬಿಲ್ಡರ್ ರವಿಯವರನ್ನು ಸನ್ಮಾನಿಸಲಾಯ್ತು.