ದೆಹಲಿ: ಟೀಮ್ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಬಿಸಿ ಬಿಸಿ ನೀರುದೋಸೆಗೆ ಮನ ಸೋತಿದ್ದಾರೆ.ನೀರು ದೋಸೆಯ ಟೇಸ್ಟ್ ನೋಡಿದ ಕೊಹ್ಲಿಗೆ ಮತ್ತೆ ಮತ್ತೆ ಬೇಕೆನಿಸಿದೆ. ನೀರು ದೋಸೆಯ ರುಚಿ ಸವಿದ ವಿರಾಟ್ ದಂಪತಿಗೆ ತುಂಬಾನೇ ಖುಷಿಯಾಗಿದೆ. ಹಾಗಂತ, ಇವರಿಬ್ಬರು ಯಾವುದೋ ರೆಸ್ಟೋರೆಂಟ್ ಗೆ ಹೋಗಿ ನೀರುದೋಸೆ ತಿಂದಿಲ್ಲ, ಇವರಿಗೆ ಇದು ಬಯಸದೇ ಬಂದ ಭಾಗ್ಯ.
ಕೊಹ್ಲಿಯ ಮನೆಗೇ ಬಂತು ಬಿಸಿಬಿಸಿ ನೀರುದೋಸೆ
ಟೀಮ್ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಮನೆಗೆ ಬಿಸಿಬಿಸಿ ನೀರುದೋಸೆ ಬಂದಿದೆ. ಅದು ಕೂಡ ಟೀಮ್ಇಂಡಿಯಾದ ಆಟಗಾರನೇ ಪಾರ್ಸಲ್ ತಂದುಕೊಟ್ಟು ಹೋಗಿದ್ದಾರೆ. ಅರೇ, ಟೀಮ್ಇಂಡಿಯಾದ ಆಟಗಾರ ಯಾರು ಅಂತ ಚಿಂತೆ ಬೇಡ, ಟೀಮ್ಇಂಡಿಯಾದ ಯಂಗ್ ಫಿನಿಷರ್ ಶ್ರೇಯಸ್ ಅಯ್ಯರ್ ಕೊಹ್ಲಿಗೆ ನೀರುದೋಸೆ ತಂದು ಕೊಟ್ಟಿದ್ದಾರೆ.

ಶ್ರೇಯಸ್ ಅಯ್ಯರ್ ಗಿದೆ ಕರಾವಳಿಯ ಲಿಂಕ್
ಶ್ರೇಯಸ್ ಅಯ್ಯರ್ ದೆಹಲಿಯಲ್ಲೇ ಹುಟ್ಟಿ ಬೆಳದವರಾದರೂ ಇವರ ತಾಯಿ ರೋಹಿಣಿ ಅಯ್ಯರ್ ಕರಾವಳಿ ಮೂಲದವರು. ತಂದೆ ಕೇರಳ ಮೂಲದವರು. ಆದ್ದರಿಂದ ಇವರ ಮನೆಯಲ್ಲಿ ದಕ್ಷಿಣಕನ್ನಡದ ಟೇಸ್ಟಿ ಫುಡ್, ಕೊಹ್ಲಿಯ ಮನೆಗೆ ಪಾರ್ಸಲ್ ಬಂದಿದೆ. ಕೊಹ್ಲಿ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಶ್ರೇಯಸ್ ಅಯ್ಯರ್ ಅಮ್ಮನ ಕೈಯಿಂದ ದೋಸೆ ಮಾಡಿಸಿಕೊಂಡು ಬಂದು ನಾಯಕನಿಗೆ ಕೊಟ್ಟಿದ್ದಾರೆ.
ಕೊಹ್ಲಿ ಮನೆಯಿಂದ ಬಿರಿಯಾನಿ ಶ್ರೇಯಸ್ ಮನೆಗೆ ಪಾರ್ಸಲ್!
ಕೊಹ್ಲಿ ಮತ್ತು ಶ್ರೇಯಸ್ ಮನೆಯವರ ನಡುವೆ ಕೊಡು ಕೊಳ್ಳುವಿಕೆ ಆರಂಭವಾಗಿದೆ. ನೀರು ದೋಸೆಯ ಟೇಸ್ಟ್ ನೋಡಿದ ಕೊಹ್ಲಿ ಕುಟುಂಬ, ತಮ್ಮ ಮನೆಯಲ್ಲಿ ಮಾಡಿದ್ದ ಮಸ್ರೂಮ್ ಬಿರಿಯಾನಿಯನ್ನು ಶ್ರೇಯಸ್ ಮನೆಗೆ ಪಾರ್ಸಲ್ ಮಾಡಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲದಲ್ಲಿ ಕೊಹ್ಲಿ ಬರೆದುಕೊಂಡಿದ್ದಾರೆ. ಅಂದ್ರೆ, ಫುಡ್ ಲವರ್ ಕೊಹ್ಲಿಗೆ ನೀರ್ ದೋಸೆ ಸಿಕ್ಕಾಪಟ್ಟೆ ಇಷ್ಟ ಆಗಿರೋದಂತು ಸತ್ಯ..ನೀರು ದೋಸೆಗೆ ಚಟ್ನಿ ಜೊತೆಗೆ ತಿಂದ್ರಾ, ಇಲ್ಲಾ ಸಾಂಬಾರ್, ಏನಾದ್ರೂ ಮಾಡಿದ್ರಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.