ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸಮುದಾಯ ಹಂತಕ್ಕೆ ಹರಡಿರುವ ಹಿನ್ನೆಲೆಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸಿಎಂಗೆ ವರದಿಯನ್ನು ಸಲ್ಲಿಸಿದೆ.. ಈ ವರದಿಯಲ್ಲಿ ಬೆಂಗಳೂರನ್ನು ಕೊರೊನಾದಿಂದ ಬಚಾವ್ ಮಾಡಲು ಕೆಲವೊಂದು ಕಠಿಣ ಸಲಹೆಯನ್ನು ಪಾಲಿಸಲೇ ಬೇಕೆಂದು ಸಿಎಂಗೆ ಸಲಹೆ ನೀಡಿದೆ..
ಒಂದು ವೇಳೆ ಈ ಸೂಚನೆಯನ್ನು ಪಾಲಿಸದೇ ಇದ್ದರೆ ಬೆಂಗಳೂರಿನಲ್ಲಿ ಕೊರೊನಾಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ.. ಮಾತ್ರವಲ್ಲ ಬೆಂಗಳೂರಿನಲ್ಲಿ ಸಮುದಾಯ ಹಂತಕ್ಕೆ ಹರಡಿರುವಂತೆ ಇಡೀ ರಾಜ್ಯದಲ್ಲೂ ಕೊರೊನಾ ಸೋಂಕು ವ್ಯಾಪಿಸಲಿದೆ ಎಂದು ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.. ಹಾಗಾದ್ರೆ ರಾಜ್ಯ ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ಸಮಿತಿ ನೀಡಿದ ಸಲಹೆಗಳು ಇಲ್ಲಿದೆ..
ಟಾಸ್ಕ್ ಫೋರ್ಸ್ ನೀಡಿದ ವರದಿಯ ಏನು..?
- ಬೆಂಗಳೂರಿನಿಂದ ಅಂತರ್ ಜಿಲ್ಲೆ ಓಡಾಟಕ್ಕೆ ಬ್ರೇಕ್ ಹಾಕಬೇಕು.
- ಬೇರೆ ಜಿಲ್ಲೆಯಿಂದ ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಬೇಕು.
- A ಸಿಂಪ್ಟಮ್ಯಾಟಿಕ್ ರೋಗಿಗಳನ್ನು ಮನೆಯಲ್ಲೇ ಐಸೋಲೇಷನ್ ಮಾಡಬೇಕು.
- ಬೆಂಗಳೂರಿನಲ್ಲಿನ ಖಾಸಗಿ ಮೆಡಿಕಲ್ ಕಾಲೇಜ್‌ನ್ನು ಸರ್ಕಾರ ಪಡೆದು ಅದರಲ್ಲಿ 200 ಬೆಡ್‌ಗಳನ್ನು ನಿರ್ಮಿಸುವಂತೆ ಸಲಹೆ
- ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸುವಂತೆ ಸಲಹೆ. ಇದರಿಂದ 10 ನಿಮಿಷದಲ್ಲಿ ಕೋವಿಡ್ ವರದಿ ಸಿಗಲಿದೆ. ಇದು ಹೈರಿಸ್ಕ್ ಪೇಷೆಂಟ್‌ಗಳಿಗೆ ಹೆಚ್ಚು ಅನುಕೂಲವಾಗಲಿದೆ.
- ಬೆಂಗಳೂರಿನಲ್ಲಿ 200 ಹೆಚ್ಚುವರಿ ಆ್ಯಂಬುಲೆನ್ಸ್ ನೀಡುವಂತೆ ಮನವಿ. ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಅಗತ್ಯವಿದೆ ಈ ಹಿನ್ನೆಲೆಯಲ್ಲಿ ಸೇವೆ ಒದಗಿಸಲು ಸೂಚನೆ.