ಕ್ರೈಸ್ಟ್ ಚರ್ಚ್: ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಂದಿದ್ದಾರೆ. ಬೆನ್ ಸ್ಟೋಕ್ಸ್ ತಂದೆ ಜೆಡ್ ಸ್ಟೋಕ್ಸ್ ಅವರಿಗೆ ಬ್ರೈನ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಬೆನ್‌ಸ್ಟೋಕ್ಸ್ ನ್ಯೂಜಿಲೆಂಡ್ ಮೂಲದ ಇಂಗ್ಲೆಂಡ್ ಆಟಗಾರನಾಗಿರುವುದರಿಂದ ಪಾಕ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಂದು ತಂದೆಯನ್ನು ನೋಡಲು ನ್ಯೂಜಿಲೆಂಡ್‌ಗೆ ತೆರಳಿದ್ದಾರೆ.
ಜೆಡ್ ಸ್ಟೋಕ್ಸ್ ನ್ಯೂಜಿಲೆಂಡ್ ರಗ್ಬಿ ತಂಡದ ರಾಷ್ಟ್ರೀಯ ಆಟಗಾರನಾಗಿದ್ರು. ಜೆಡ್ ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಪಡೆದ ಸ್ಟೋಕ್ಸ್, ನ್ಯೂಜಿಲೆಂಡ್‌ಗೆ ಹಿಂತಿರುಗಿದರೂ ಕೂಡ, ಕೂಡಲೇ ತಂದೆಯನ್ನು ನೋಡಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ದೇಶದ ಕ್ವಾರಂಟೈನ್ ನಿಯಮದ ಪ್ರಕಾರ ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ನಲ್ಲಿ ಸ್ಟೋಕ್ಸ್ ಇರಬೇಕಾಗುತ್ತದೆ.
ಬೆನ್ ಸ್ಟೋಕ್ಸ್ ಐಪಿಎಲ್ ಟೂರ್ನಿಯ ಆರಂಭದ ವಾರಗಳಲ್ಲಿ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಲಭ್ಯವಾಗುವ ಬಗ್ಗೆ ಅನುಮಾನವಿದೆ. ಮೊದಲ ಹದಿನಾಲ್ಕು ದಿನಗಳ ಕ್ವಾರಂಟೈನ್ ನಂತರ, ಕುಟುಂಬದೊಂದಿಗೆ ಸ್ಟೋಕ್ಸ್ ಇರಲೇಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಮೊದಲ ಏಳು ದಿನ ಐಪಿಎಲ್‌ನಲ್ಲಿ ಸ್ಟೋಕ್ಸ್ ಆಡುವುದು ಅನುಮಾನ ಎನ್ನಲಾಗಿದೆ.