ದೆಹಲಿ: ಹಿಂದೂಸ್ತಾನ ಎದ್ದು ನಿಂತು ಜೋರಾಗಿ ಭಾರತಾಂಬೆಗೆ ಜೈ ಅಂತ ಹೇಳಲೇಬೇಕಾದ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. ನಮ್ಮ ಸೈನ್ಯಕ್ಕೆ ದೈತ್ಯಶಕ್ತಿಯ ಸೇರ್ಪಡೆಯಾಗುತ್ತಿದೆ. ರಣಧೀರ ರಫೇಲ್ ಭಾರತದ ನೆಲಕ್ಕೆ ಬಂದಿಳಿದಿದ್ದಾನೆ. ಫ್ರಾನ್ಸ್ ನಿಂದ ಸೋಮವಾರ ಹೊರಟಿದ್ದ ರಫೇಲ್ ಯುದ್ಧ ವಿಮಾನಗಳು ಹಿಂದೂಸ್ತಾನಕ್ಕೆ ಬಂದಿಳಿದಿವೆ. ರಫ್ ಆಂಡ್ ಟಫ್ ರಫೇಲ್ ಭಾರತದ ಸೈನ್ಯದ ಬಲವನ್ನು ಹೆಚ್ಚಿಸಿದೆ. ಭಾರತದ ನೆರೆಯ ರಾಷ್ಟ್ರಗಳು ಫ್ರಾನ್ಸ್ ನಿಂದ ರಫೇಲ್ ಹೊರಟಿರುವ ವೀಡಿಯೋ ನೋಡಿಯೇ ಗಢಗಢ ನಡುಗಲಾರಂಭಿಸಿವೆ.
ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಶುಕ್ರವಾರ ಭಾರತೀಯ ವಾಯುಪಡೆಗೆ ಸೇರಿಕೊಂಡಿದೆ. ಮೊದಲ ಕಂತಿನ ಐದು ಫೈಟರ್ ಜೆಟ್ ಗಳು ಹರಿಯಾಣದ ಅಂಬಾಲಾ ವಾಯು ನೆಲೆಗೆ ಬಂದಿಳಿದಿವೆ. ಫ್ರಾನ್ಸ್ ದೇಶದ ಡಸಾಲ್ಟ್ ಸಂಸ್ಥೆ ತಯಾರಿಸಿದ ರಫೇಲ್ ಯುದ್ಧವಿಮಾನ ಭಾರತದ ಬತ್ತಳಿಕೆಯಲ್ಲಿರುವ ಪ್ರಬಲ ಆಯುಧಗಳಲ್ಲೊಂದಾಗಿದೆ. ಈ ಮೂಲಕ ಭಾರತದ ವಿಶ್ವದ ಅತ್ಯಂತ ಪ್ರಬಲ ಯುದ್ಧ ವಿಮಾನಗಳ ಸಾಲಿಗೆ ಸೇರಿದೆ.
ಫ್ರಾನ್ಸ್‌ನ ಮೆರಿಗ್ನಾಕ್ ವಾಯುನೆಲೆಯಿಂದ ಭಾರತೀಯ ವಾಯುಸೇನೆಯ ಆರು ನುರಿತ ಪೈಲಟ್‌ಗಳು ಈ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಿದ್ದಾರೆ. ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ದೊರೆಯಲಿದ್ದು, ಈ ಪೈಕಿ ಮೊದಲ ಹಂತದ ಐದು ವಿಮಾನಗಳು ಭಾರತಕ್ಕೆ ಬಂದಿಳಿದಿದೆ.
ಹೇಗಿತ್ತು ಗೊತ್ತಾ ರಫೇಲ್ ಪ್ರಯಾಣದ ಹಾದಿ..?
ಜುಲೈ 27ರಂದು ಫ್ರಾನ್ಸ್‌ನ ಮೆರಿಗ್ನಾಕ್ ವಾಯುಸೇನಾ ನೆಲೆಯಿಂದ 5 ರಫೇಲ್ ಯುದ್ಧ ವಿಮಾನ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಭಾರತೀಯ ವಾಯುಸೇನೆಯ ಆರು ನುರಿತ ಪೈಲಟ್‌ಗಳು ಈ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಿದ್ದಾರೆ. ಸುಮಾರು 7 ಗಂಟೆಗಳ ಪ್ರಯಾಣದ ಬಳಿಕ ರಫೇಲ್ ಯುದ್ಧ ವಿಮಾನಗಳು ಯುಎಇಯ ಅಲ್ ದಫ್ರಾ ವಾಯುಸೇನಾ ನೆಲೆಗೆ ಬಂದಿಳಿಯಿತು. ಬಳಿಕ ಅಲ್ಲಿಂದ ಐದೂ ರಫೇಲ್ ಜೆಟ್‌ಗಳು ಭಾರತದತ್ತ ಪ್ರಯಾಣ ಬೆಳೆಸಿ ಇವತ್ತು ಅಂಬಾಲಾ ವಾಯುಸೇನಾ ನೆಲೆಗೆ ಬಂದಿಳಿಯಿತು. ಇಂಟ್ರೆಸ್ಟಿಂಗ್ ವಿಚಾರ ಅಂದರೆ ಫ್ರಾನ್ಸ್‌ನಿಂದ ಹೊರಟ ಐದು ರಫೇಲ್ ಯುದ್ಧ ವಿಮಾನದ ಪೈಕಿ ಒಂದು ಜೆಟ್ ಗೆ ಆಗಸದಲ್ಲೇ ಇಂಧನ ತುಂಬಿಸಲಾಗಿದೆ.
ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿದ್ದರೂ, ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆ ಇತ್ತು. ಸುಖೋಯ್, ಮಿಗ್ ಫೈಟರ್ ಜೆಟ್ಗಳಂಥ ಪ್ರಬಲ ಯುದ್ಧ ವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್ಗಳಿಗೆ ಸಾಟಿಯಾಗಬಲ್ಲ ಯುದ್ಧ ವಿಮಾನಗಳಿರಲಿಲ್ಲ. ಆದರೆ ಈಗ ರಫೇಲ್ನಿಂದ ಆ ಕೊರತೆ ನೀಗಿಸಿದೆ.

ರಫೇಲ್ ಭಾರತಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದಾರೆ ಹಿಲಾಲ್ ಅಹ್ಮದ್..!
ರಫೇಲ್ ವಿಮಾನಗಳು ಭಾರತಕ್ಕೆ ಬರುವಲ್ಲಿ ಜಮ್ಮು ಕಾಶ್ಮೀರ ಮೂಲದ ವಾಯುಸೇನೆಯ ಅಧಿಕಾರಿ ಹಿಲಾಲ್ ಅಹ್ಮದ್ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಒಂದು ವರ್ಷದಿಂದ ಫ್ರಾನ್ಸ್‌ನಲ್ಲಿರುವ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ಭಾರತದ ಬೇಡಿಕೆಗೆ ಅನುಗುಣವಾಗಿ ಡಸಾಲ್ಡ್ ಕಂಪನಿಯ ಜೊತೆ ಸಂವಹನ ನಡೆಸಿ ರಫೇಲ್ ವಿಮಾನವನ್ನು ರೂಪಿಸಿದ್ದಾರೆ. 1988ರ ಡಿಸೆಂಬರ್ 17 ರಂದು ವಾಯುಸೇನೆಗೆ ಪೈಲಟ್ ಆಗಿ ಸೇರ್ಪಡೆಗೊಂಡ ಇವರು 1993ರಲ್ಲಿ ಫೈಲ್ಡ್ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. 2004ರಲ್ಲಿ ವಿಂಗ್ ಕಮಾಂಡರ್, 2016ರಲ್ಲಿ ಗ್ರೂಪ್ ಕ್ಯಾಪ್ಟನ್, 2016ರಲ್ಲಿ ಏರ್ ಕಮಾಂಡರ್ ಹುದ್ದೆ ಸಿಕ್ಕಿತ್ತು. ಮೀರಾಜ್ -2000, ಮಿಗ್ 21, ಕಿರಣ್ ವಿಮಾನವನ್ನು ಅಪಘಾತ ರಹಿತವಾಗಿ ಚಲಾಯಿಸಿದ ಅನುಭವ ಇವರಿಗೆ ಇದೆ. 3 ಸಾವಿರ ಕಿ.ಮೀ ಹಾರಾಟದ ಅನುಭವ ಹೊಂದಿದ್ದ ಕಾರಣ ಹಿಲಾಲ್ ಅಹ್ಮದ್ ಅವರಿಗೆ ರಫೇಲ್ ಉಸ್ತುವಾರಿಯನ್ನು ನೀಡಲಾಗಿತ್ತು.

ಏನಿದು ರಫೇಲ್ ಒಪ್ಪಂದ..?
ಭಾರತೀಯ ವಾಯುಸೇನೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ವೃದ್ಧಿಸುವ ಯೋಜನೆಯ ಭಾಗವಾಗಿ, ಸೆಪ್ಟೆಂಬರ್ 23, 2016ರಲ್ಲಿ ಫ್ರಾನ್ಸ್‌ನ ಖ್ಯಾತ ಡಸ್ಸಾಲ್ಟ್ ಏವಿಯೇಶನ್ ಸಂಸ್ಥೆಯೊಡನೆ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು (28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಎಂಬ ಡೆಡ್‌ಲೈನ್ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬಂದಿಳಿದ್ರೆ, ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ಪಡೆಯಲು ಬಳಕೆಯಾಗಿವೆ. ಇನ್ನು ಎಲ್ಲಾ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ. ಈ ನಡುವೆ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆಯೂ ಒಪ್ಪಂದ ಯಶಸ್ವಿಯಾಗಿದ್ದು, 5 ರಫೇಲ್ ಯುದ್ಧ ವಿಮಾನ ಅಂಬಾಲಾ ವಾಯು ನೆಲೆಗೆ ಬಂದಿಳಿದಿವೆ.
ರಫೇಲ್ ಯುದ್ಧ ವಿಮಾನದ ವಿಶೇಷತೆಗಳು ಏನು..?
ರಫೇಲ್ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ. ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.
ಫ್ರಾನ್ಸ್ ನಿಂದ ಬರಲಿದೆ “ಹ್ಯಾಮರ್” ಕ್ಷಿಪಣಿ..!
ಭಾರತ ಕೇವಲ ರಫೇಲ್ ಯುದ್ಧಗಳನ್ನಷ್ಟೇ ಅಲ್ಲದೇ ಫ್ರಾನ್ಸ್‌ನಿಂದ ಹ್ಯಾಮರ್ ಕ್ಷಿಪಣಿಗಳನ್ನೂ ತರಿಸಿಕೊಳ್ಳಲಾಗಿದೆ. ಕೊನೆ ಹಂತದಲ್ಲಿ ಪ್ರಬಲ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರ ಜೋಡಣೆಯನ್ನು ರಫೇಲ್‌ಗೆ ಜೋಡಿಸಲಾಗಿದೆ. ಕಣ್ಣಿಗೆ ಕಾಣದ ಸುಮಾರು 150 ಕಿಲೋ ಮೀಟರ್ ಆಚೆಯ ಶತ್ರು ವಿಮಾನವನ್ನು ಗುರುತಿಸಿ ಹೊಡೆದುರುಳಿಸಬಲ್ಲ ಕ್ಷಿಪಣಿ ತಂತ್ರಜ್ಞಾನವನ್ನು ಈ ಜೆಟ್‌ಗೆ ಅಳವಡಿಸಲಾಗಿದೆ.
ಇಂದನ ತುಂಬಿಸುವುದು ಹೇಗೆ ಗೊತ್ತಾ?