ಮಂಗಳೂರು- ಮಂಗಳೂರಿನ ಗುರುಪುರದ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತದಿಂದಾಗಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಅಪಾರ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ, ಗುಡ್ಡದ ಮೇಲಿದ್ದ ಮತ್ತು ಕೆಳಗಿದ್ದ ಮನೆಗಳಿಗೆ ಹಾನಿಯಾಗಿದೆ.

ಗುಡ್ಡ ಕುಸಿಯುತ್ತಿರುವಾಗಲೇ ಗುರುಪುರ ಕೈಕಂಬ ಬಂಗ್ಲ ಗುಡ್ಡೆಯ ಪಕ್ಕ ಜನ ಅಪಾರ ಸಂಖ್ಯೆಯಲ್ಲಿ ಸೇರಿದ್ದರು, ಈ ವೇಳೆಯೂ ಕೂಡ ಗುಡ್ಡ ಕುಸಿತವಾಗಿದ್ದು, ಕೆಳಗಿದ್ದ ಜನರು ಓಡಿ ತಪ್ಪಿಸಿಕೊಂಡಿದ್ದಾರೆ.

ಮಣ್ಣಿನ ಅಡಿಯಲ್ಲಿ ಕೆಲವರು ಸಿಲುಕಿರು ಸಾಧ್ಯತೆಯಿದ್ದು, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.