ಮಂಗಳೂರು-ಮಂಗಳೂರಿನ ಹೆರಿಗೆ ಆಸ್ಪತ್ರೆ ಲೇಡಿಗೋಷನ್ ಮುಂದಿನ ಆರು ದಿನಗಳ ಕಾಲ ಬಂದ್ ಆಗಲಿದೆ. ಇಲ್ಲಿರುವ ಹೆಚ್ಚಿನ ವೈದ್ಯರು, ಬೇರೇ ಬೇರೆ ವಿಭಾಗದ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇರುವುದರಿಂದ ಆರು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಗಿದೆ.
ಅಲ್ಲದೇ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಫ್ಯೂಮಿಗೇಶನ್ ಮತ್ತು ಸ್ಯಾನಿಟೈಸೇಶನ್ ಮಾಡಬೇಕಾಗಿರುವುದರಿಂದ ಮುಂದಿನ ಆರು ದಿನಗಳ ಕಾಲ ಬಂದ್ ಮಾಡುತ್ತೇವೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಜೂನ್ 30 ರಿಂದ ಜುಲೈ 5ರವರೆಗೆ ಆಸ್ಪತ್ರೆ ಓಪನ್ ಇರುವುದಿಲ್ಲ.
ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಪತ್ರ
ಈಗಿರುವ ರೋಗಿಗಳ ಮುಂದಿನ ಚಿಕಿತ್ಸೆಗಾಗಿ ಖಾಸಗಿ ವೈದ್ಯಕೀಯ ಆಸ್ಪತ್ರೆಗಳಿಗೆ ಕಳುಹಿಸಲು ಶಿಫಾರಸ್ಸು ಪತ್ರ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಜುಲೈ 6ನೇ ತಾರೀಕಿನಿಂದ ಲೇಡಿಗೋಷನ್ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ಡಡ ಜಿಲ್ಲೆಯೇ ಈ ಆಸ್ಪತ್ರೆಯನ್ನು ಹೆಚ್ಚಾಗಿ ಅವಲಂಬಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಗೊಂದಲಗಳು ಆಗುವ ಸಾಧ್ಯತೆಯೂ ಇಲ್ಲದಿಲ್ಲ.