ಕರಾಚಿ- ಪಾಕಿಸ್ತಾನದಲ್ಲಿಯೂ ಕೂಡ ಕೊರೊನಾದ ಆರ್ಭಟ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪಾಕಿಸ್ತಾನದ ಕ್ರಿಕೆಟರ್ಸ್ ಮೇಲಂತೂ ಕೊರೊನಾ ತನ್ನ ಕರಿಛಾಯೆಯನ್ನೇ ಮೂಡಿಸಿದೆ.ಪಾಕ್ ಹಿರಿಯ ಆಟಗಾರ ಶಾಹೀದ್ ಆಫ್ರಿದಿಗೆ ಕೊರೊನಾ ಪಾಸಿಟಿವ್ ಆದ ಬೆನ್ನಲ್ಲೇ ಮತ್ತೆ ಮೂವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ಸಿಕ್ಕಿದೆ.
ಪಾಕಿಸ್ತಾನದ ಆಲ್ ರೌಂಡರ್ 43 ಏಕದಿನ, ಐದು ಟೆಸ್ಟ್ ಹಾಗೂ 40 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಶಬಾದ್ ಖಾನ್, ಯುವ ಬಲಗೈ ಬ್ಯಾಟ್ಸ್ ಮನ್ ಹೈದರ್ ಅಲಿ ಹಾಗೂ ಯುವ ಬೌಲರ್ ಹ್ಯಾರೀಸ್ ರೌಫ್ ಗೆ ಕೊರೊನಾ ಇರುವುದು ಪತ್ತೆಯಾಗಿದೆ.

ಈ ಆಟಗಾರರು ಬೇಗನೇ ಗುಣಮುಖರಾಗಲಿ ಎಂದು ಐಸಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಾರೈಸಿದೆ.

ಕೊರೊನಾದ ನಡುವೆಯೂ ಇಂಗ್ಲೆಂಡ್ ಪ್ರವಾಸಕ್ಕೆ ಪಾಕ್ ಕ್ರಿಕೆಟ್ ತಂಡ ಸಜ್ಜಾಗಿತ್ತು. ಆದರೆ ಈ ಮೂರು ಕೇಸ್ ಗಳು ಪಾಕ್ ಜೊತೆಗೆ ಇಂಗ್ಲೆಂಡ್ ಕ್ರಿಕೆಟಿಗರಿಗೂ ಆತಂಕ ಮೂಡಿಸಿದೆ.