ಬೆಂಗಳೂರು- ಇಂಗ್ಲೆಂಡ್ ನಲ್ಲಿ ಕೊರೊನಾ ಮತ್ತೆ ತನ್ನ ರಣಕೇಕೆ ಆರಂಭಿಸಿದೆ. ಇದಕ್ಕಾಗಿ ಬ್ರಿಟನ್ ನಲ್ಲಿ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ. ಅಲ್ಲದೇ, ಬ್ರಿಟನ್ ನಿಂದ ಭಾರತಕ್ಕೆ ಡಿಸೆಂಬರ್ 31ರವರೆಗೆ ವಿಮಾನಯಾನ ರದ್ದುಗೊಳಿಸಿದೆ. ಅಲ್ಲದೇ, ಕರ್ನಾಟಕದಲ್ಲೂ ಈಗ ಕಟ್ಟೆಚ್ಚರವಹಿಸಲಾಗಿದೆ. ವಿದೇಶದಿಂದ ಆಗಮಿಸಿದವರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.
ವಿದೇಶದಿಂದ ಟೆಸ್ಟ್ ಮಾಡಿಸದೇ ವಿಮಾನ ಹತ್ತಿದವರನ್ನು ಪತ್ತೆ ಹಚ್ಚುವ ಕೆಲಸ ಈಗಾಗ್ಲೇ ಶುರುವಾಗಿದೆ. 138 ಪ್ರಯಾಣಿಕರು ಇಂಗ್ಲೆಂಡ್ ನಿಂದ ಆಗಮಿಸಿದವರಿದ್ದಾರೆ ಎನ್ನಲಾಗಿದ್ದು, ಎಲ್ಲರ ಸಂಪರ್ಕ ಸಂಖ್ಯೆಗಳನ್ನು ಆರೋಗ್ಯ ಇಲಾಖೆ ಇಟ್ಟುಕೊಂಡಿದ್ದು, ಅವರ ವಿಚಾರಣೆಯನ್ನು ಮಾಡುತ್ತಿದೆ. ಇದರ ಜೊತೆ ವಿಮಾನ ನಿಲ್ದಾಣದಲ್ಲೇ ಒಂದು ಆರ್ ಟಿ ಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲು ಚಿಂತಿಸಲಾಗಿದ್ದು, ಏರ್ ಪೋರ್ಟ್ ನಲ್ಲೇ ಒಂದು ಲ್ಯಾಬ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ತಪಾಸಣೆಗೆ ಒಂದು ತಂಡವನ್ನು ಇರಿಸಲಾಗಿದೆ.