ಸೊರಬ: ಶಿವಮೊಗ್ಗದಲ್ಲಿ ಕುಮಾರ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಒಂದಾಗಲಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್ ಗೆ ಸೇರಲಿದ್ದಾರೆ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ. ಇದು ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಸಂಚಲನವನ್ನೇ ಉಂಟು ಮಾಡಿದೆ. ಆದರೆ ಈ ಎಲ್ಲಾ ಸುದ್ದಿಗಳ ಬಗ್ಗೆ ಸೊರಬದಲ್ಲಿ ಮಾತನಾಡಿರುವ ಕುಮಾರ್ ಬಂಗಾರಪ್ಪ, ನಾವು ಸಹೋದರರಾಗಿ ಒಟ್ಟಾಗಬೇಕೆಂಬುದು ನಿಜ, ಆದರೆ ರಾಜಕೀಯವಾಗಿ ಅಲ್ಲ ಎಂದು ಹೇಳಿದ್ದಾರೆ.
ನಾನು ಬಿಜೆಪಿಯ ಕಾರ್ಯಕರ್ತ, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯುವುದಿಲ್ಲ. ಒಂದು ವೇಳೆ ಬಿಜೆಪಿಗೆ ಮತ್ತಷ್ಟುಬಲಬರುವುದಾದರೇ ಮಧು ಬಿಜೆಪಿಗೆ ಬಂದರೂ ಬರಬಹುದು ಅಂತ ಹೇಳಿದ್ರು. ಇದೇ ವೇಳೆ ಸೊರಬದಲ್ಲಿ ಮಧು ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ ಅನ್ನೋದನ್ನು ಪರೋಕ್ಷವಾಗಿ ಹೇಳಿದರು.
ಈ ಮೂಲಕ ಮಧು ಮತ್ತು ಕುಮಾರ ಬಂಗಾರಪ್ಪ ರಾಜಕೀಯವಾಗಿ ಒಂದಾಗುವ ಸಾಧ್ಯತೆ ಸದ್ಯಕ್ಕಿಲ್ಲ. ರಾಜಕೀಯವಾಗಿ ಒಂದಾಗದೇ ಇದ್ದರೂ, ಇವರಿಬ್ಬರ ನಡುವಿನ ಕೌಟುಂಬಿಕ ಬಿರುಕು ಶಮನವಾಗಿ, ಸಹೋದರರು ಒಂದಾಗಲಿ ಅನ್ನೋದು ಬಂಗಾರಪ್ಪನವರ ಅಭಿಮಾನಿಗಳ ಆಶಯವಾಗಿದೆ.