ಮುಂಬೈ-ಬಾಲಿವುಡ್ ನ ಎವರ್ ಗ್ರೀನ್ ಹೀರೋ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಸಂಜೆಯ ವೇಳೆಗೆ ಆಸ್ಪತ್ರೆಗೆ ಅಮಿತಾಬ್ ಬಚ್ಚನ್ ದಾಖಲಾಗಿದ್ದು, ಅವರೇ ತಮ್ಮ ಟ್ವೀಟರ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಘೋಷಣೆ ಮಾಡಿಕೊಂಡಿದ್ದಾರೆ.

ಮನೆಯಲ್ಲೇ ಇದ್ದ ಅಮಿತಾಬ್ ಬಚ್ಚನ್!
ಬಾಲಿವುಡ್ ನ ಶೆಹನ್ ಷಾ ಅಮಿತಾಬ್ ಬಚ್ಚನ್ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ ಕಾನೂನನ್ನು ಕಟ್ಟು ನಿಟ್ಟಿನಲ್ಲಿ ಪಾಲಿಸುತ್ತಿದ್ದರು. ಹಿರಿಯ ನಾಗರಿಕರು ಹೊರ ಹೋಗಬಾರದು ಅನ್ನುವ ಕಾರಣದಿಂದಾಗಿ 77 ವರ್ಷದ ಅಮಿತಾಬ್ ಬಚ್ಚನ್, ತಮ್ಮ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಅಮಿತಾಬ್ ಬಚ್ಚನ್ ಆಯನ್ ಮುಖರ್ಜಿ ನಿರ್ದೇಶನದ ರಣಬೀರ್ ಕಪೂರ್ ನಾಯಕನಾಗಿರುವ ಬ್ರಹ್ಮಾಸ್ತ್ರದಲ್ಲಿ ನಟಿಸುತ್ತಿದ್ದರು. ಜೊತೆಗೆ ಕೌನ್ ಬನೇಗಾ ಕ್ರೋರ್ ಪತಿ (ಕೆಬಿಸಿ)ಯ ಹನ್ನೆರಡನೇ ಸೀಸನ್ ನ ಶೂಟಿಂಗ್ ಕೂಡ ಮಾಡಬೇಕಾಗಿತ್ತು. ಆದರೆ ಮಹಾರಾಷ್ಟ್ರದ ನಿಯಮದಿಂದಾಗಿ ಯಾವುದೇ ಶೂಟಿಂಗ್ ಗಳಿಗೂ ಕೂಡ ಹೋಗುತ್ತಿರಲಿಲ್ಲ.
ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿ
ಅಮಿತಾಬ್ ಬಚ್ಚನ್ ತಮ್ಮ ಟ್ವೀಟರ್ ನಲ್ಲಿ ತನಗೆ ಕೊರೊನಾ ಪಾಸಿಟಿವ್ ಬಂದಿದ್ದು, ತನ್ನ ಜೊತೆಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಿಕೊಳ್ಳಿ ಅಂತ ಬರೆದುಕೊಂಡಿದ್ದಾರೆ