ಮುಂಬೈ-ಟೀಮ್ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದಾ ಒಂದಿಲ್ಲೊಂದು ಪ್ರವಾಸದಲ್ಲೇ ಇರುತ್ತಿದ್ರು. ಕ್ರಿಕೆಟನ್ನೇ ಉಸಿರಾಡೋ ಈ ಟೀಮ್ಇಂಡಿಯಾದ ಲೀಡರ್ ಗೆ ಈಗ ಕರೊನಾದ ಕರಾಳತೆಯ ಅನುಭವವಾಗ್ತಿದೆ.ಮನೆಯಲ್ಲಿ ಕುಳಿತುಕೊಂಡೇ ಇರುವ ವಿರಾಟನಿಗೆ ಹತ್ತು ಹಲವು ಮಧುರ ನೆನಪುಗಳು ಕಣ್ಣ ಮುಂದೆ ಬರುತ್ತಿವೆಯಂತೆ. ಅದರಲ್ಲೂ ವಿರಾಟ್ ಕೊಹ್ಲಿ ತಮ್ಮ ಸುಂದರ ನೆನಪನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇಂತಹ ಸುಂದರ ಪರಿಸರ ಎಲ್ಲವನ್ನೂ ಕೂಡ ಮರೆಸುತ್ತೆ. ಪ್ರೀತಿಪಾತ್ರರ ಜೊತೆ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾಧಿಸುತ್ತೇವೆ ಅಂತ ವಿರಾಟ್ ಬರೆದಿದ್ದಾರೆ.
ಟೀಮ್ಇಂಡಿಯಾದ ನಾಯಕ ಮಡದಿ ಅನುಷ್ಕಾ ಜೊತೆ ಕುಳಿತುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಅಮೂಲ್ಯವಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.