ಭಾರತೀಯ ಸಿನಿಮಾ ಜಗತ್ತಿನಲ್ಲಿ ಸ್ಯಾಂಡಲ್ ವುಡ್ ನ ಖದರ್ ಜಾಸ್ತಿಯಾಗುತ್ತಲೇ ಇದೆ. ಸ್ಯಾಂಡಲ್ ವುಡ್ ನ ಚಿತ್ರಗಳು ರಿಮೇಕ್ ಆಗುತ್ತಿವೆ. ಇಲ್ಲಿನ ಕಥೆಗಳು ಪಂಚ ಭಾಷೆಗಳಲ್ಲೂ ಕೂಡ ಸಿನಿಮಾಗಳಾದ ಉದಾಹರಣೆಗಳಿವೆ. ಹೀಗೆ ಕೇರಳದ ಚಿತ್ರರಂಗ ಕೂಡ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ಇತ್ತೀಚಿಗೆ ಬಿಡುಗಡೆಯಾದ ಸಿನಿಮಾ ಸೂಫಿಯಮ್ ಸುಜಾತಯಮ್ ಚಿತ್ರದಲ್ಲಿ ಕನ್ನಡದ ಮ್ಯೂಸಿಕ್ ಬಳಸಿದ್ದಾರಾ ಅನ್ನುವ ಅನುಮಾನ ಬಲವಾಗುತ್ತಿದೆ.
ಅವನೇ ಶ್ರೀ ಮನ್ನಾರಾಯಣ ಚಿತ್ರದ ಟ್ರ್ಯಾಕ್ ಒಂದನ್ನು ಬಳಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸೂಫಿಯಮ್ ಸುಜಾತಯಮ್ ಚಿತ್ರದ 20ನಿಮಿಷದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವ ಒಂದು ದೃಶ್ಯ ಬರುತ್ತೆ. ಈ ದೃಶ್ಯದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಮ್ಯೂಸಿಕ್ ಬಳಸಿದ್ದಾರೆ ಎನ್ನಲಾಗಿದೆ.
ಮಲೆಯಾಳಿ ಚಿತ್ರರಂಗ ಕನ್ನಡದ ಚಿತ್ರದ ಟ್ರ್ಯಾಕ್ ಬಳಸಿರುವುದು ಸ್ಯಾಂಡಲ್ ವುಡ್ ಗೆ ಹೆಮ್ಮೆಯ ಸಂಗತಿ.ಅದರಲ್ಲೂ ಅವನೇ ಶ್ರೀ ಮನ್ನಾರಾಯಣ ಚಿತ್ರ ತಂಡ ಈ ಮ್ಯೂಸಿಕ್ ಕೇಳಿ ಅದೇನು ಪ್ರತಿಕ್ರಿಯೆ ನೀಡುತ್ತೋ ಕಾದು ನೋಡ್ಬೇಕು.