ಬೆಂಗಳೂರು-ಕರ್ನಾಟಕ ನಿಧಾನವಾಗಿ ಮಹಾರಾಷ್ಟ್ರದಂತೆ ಆಗುತ್ತಾ ಅನ್ನೋ ಅನುಮಾನ ಹೆಚ್ಚಾಗುತ್ತಿದೆ. ಇಂದು ಕೂಡ ರಾಜ್ಯದಲ್ಲಿ ಕರೊನಾದ ಕರಾಳತೆ ಮುಂದುವರೆದಿದೆ. ಶನಿವಾರ ಒಂದೇ ದಿನ ಒಟ್ಟು 1839 ಕೇಸ್ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಖಚಿತವಾಗಿರುವ ಪ್ರಕರಣಗಳು 21549 ಆಗಿದೆ.

ರಾಜಧಾನಿಯಲ್ಲಿಂದು 1172 ಕೊರೊನಾ ಪಾಸಿಟಿವ್
ರಾಜಧಾನಿ ಬೆಂಗಳೂರು ಕೊರೊನಾದ ಹಾಟ್ ಸ್ಪಾಟ್ ಆಗುವತ್ತಾ ದಾಪುಗಾಲಿಡುತ್ತಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 1172 ಕೇಸ್ ದಾಖಲಾಗಿದೆ. ಇದು ರಾಜ್ಯ ಸರ್ಕಾರದ ನಿದ್ದೆಗೆಡಿಸಿರುವುದರ ಜೊತೆಗೆ, ಬೆಂಗಳೂರಿನ ವಾಸಿಗಳನ್ನೂ ಚಿಂತೆಗೀಡುಮಾಡಿದೆ.
ದಕ್ಷಿಣ ಕನ್ನಡದಲ್ಲಿಂದು 75 ಕೇಸ್
ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗುತ್ತಿದೆ, ಇದರ ಜೊತೆಗೆ ಕೊರೊನಾನೂ ನಾನೇನು ಕಡಿಮೆಯಿಲ್ಲ ಎಂಬಂತೆ ಆರ್ಭಟಿಸುತ್ತಿದ್ದು, ಇಂದು ದಕ್ಷಿಣ ಕನ್ನಡದಲ್ಲಿ 75 ಕೇಸ್ ದಾಖಲಾಗಿದೆ. ಹಳ್ಳಿ ಹಳ್ಳಿಗೂ ಕೂಡ ಕೊರೊನಾ ವ್ಯಾಪಿಸಿದ್ದು ಕರಾವಳಿಗರಲ್ಲಿ ಭಯ ಮೂಡಿಸಿದೆ. ದಕ್ಷಿಣ ಕನ್ನಡದಲ್ಲಿಂದು ಮೂರು ಜನರ ಸಾವಾಗಿದ್ದು, ಒಟ್ಟು 22 ಜನ ಕೊರೊನಾದಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.ಇವತ್ತು ದಕ್ಷಿಣ ಕನ್ನಡದಲ್ಲಿ 26 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜನರು ಇಂದು ಕೊರೊನಾಗೆ 42 ಜನರು ಬಲಿ
ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಇಂದು ಕರ್ನಾಟಕದಲ್ಲಿ ಕೊರೊನಾದಿಂದಾಗಿ ವಿಧಿವಶರಾದವರ ಸಂಖ್ಯೆ 42 . ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 335.

ಇಂದು 439 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕರ್ನಾಟಕದಲ್ಲಿಂದು ಗುಣಮುಖರಾಗಿ ಆಸ್ಪತ್ರೆಯಿಂದ 439 ಮಂದಿ ಬಿಡುಗಡೆಯಾಗಿದ್ದಾರೆ.ಹೀಗಾಗಿ ಈ ವರೆಗೆ ಒಟ್ಟು ಜನ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಈಗ ರಾಜ್ಯದಲ್ಲಿ ಒಟ್ಟು 9244 ಸಕ್ರೀಯ ರೋಗಿಗಳಿದ್ದಾರೆ.