ಮುಂಬೈ- ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೆು ಕಡೆ ವರುಣನ ಆರ್ಭಟವಾದ್ರೆ, ಮತ್ತೊಂದೆಡೆ ವರುಣನಾರ್ಭಟಕ್ಕೆ ಜನರು ನಲುಗಿದ್ದಾರೆ. ವಾಣಿಜ್ಯನಗರಿಯಲ್ಲಿ ಗುರುವಾರ ಎರಡು ಕಟ್ಟಡಗಳು ಕುಸಿದು ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಸಬ್ ಅರ್ಬನ್ ಮಾಲ್ವನಿಯ ಹತ್ತಿರ ಇದ್ದ ಒಂದು ಹಳೇಯ ಕಟ್ಟಡ ಕುಸಿದು ಬಿತ್ತು,.ಇದರಡಿಯಲ್ಲಿ ಸಿಲುಕಿದ್ದ 15ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯ್ತು. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಕುಸಿದ ಭಾನುಶಾಲಿ ಕಟ್ಟಡ,ಇಬ್ಬರು ಸಾವು
ಗುರುವಾರ ಸಂಜೆ 4.45ರ ಹೊತ್ತಿಗೆ ಮುಂಬೈನ ಮಿಂಟ್ ರಸ್ತೆಯಲ್ಲಿದ್ದ ಹಳೆಯ ಭಾನುಶಾಲಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯೂ ಕೂಡ ಹತ್ತು ಹೆಚ್ಚು ಜನರು ಕಟ್ಟಡದಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸಲಾಗಿದೆ.

ಕುಸಿಯುವ ಹಂತದಲ್ಲಿವೆ ಕೆಲವು ಕಟ್ಟಡಗಳು!
ಮಳೆಯ ರುದ್ರ ನರ್ತನಕ್ಕೆ ಈಗಾಗ್ಲೇ ಎರಡು ಕಟ್ಟಡಗಳು ಕುಸಿದಿವೆ. ಅಷ್ಟೆ ಅಲ್ಲದೇ, ಮುಂಬೈನಲ್ಲಿ ಇನ್ನೂ ಕೆಲ ಕಟ್ಟಡಗಳು ಕುಸಿಯುವ ಭೀತಿಯಲ್ಲಿವೆ ಎಂದು ಅಲ್ಲಿನ ಸ್ಥಳೀಯಾಡಳಿತ ಎಚ್ಚರಿಕೆ ನೀಡಿದೆ. ಹೀಗೆ ಮುಂಬೈ ನಗರವನ್ನು ಕೊರೊನಾದ ನಂತರ ವರುಣ ಸಿಕ್ಕಾಪಟ್ಟೆ ಕಾಡುತ್ತಿದ್ದಾನೆ.ಸ್ಥಳಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.