ದುಬೈ-ಕರೊನಾದ ನಡುವೆಯೂ ಕ್ರಿಕೆಟ್ ಮತ್ತೆ ಆರಂಭವಾಗಿದೆ. ಅದರಲ್ಲೂ ಕಮರ್ಷಿಯಲ್ ಖೇಲ್ ಅಂತಲೇ ಕರೆಸಿಕೊಳ್ಳುವ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿದ್ದಾವೆ.
ಅಬುದಾಬಿಯಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಗೆಲುವಿನ ಶುಭಾರಂಭಗೈಯಲು ಪ್ಲಾನ್ ರೂಪಿಸಿವೆ. ಈಗಾಗ್ಲೇ ಡ್ಯಾಡೀಸ್ ಆರ್ಮಿ ಅಂತಲೇ ಕರೆಸಿಕೊಂಡಿರುವ ಚೆನ್ನೈ ತಂಡಕ್ಕೆ ಎರಡು ಆಘಾತಗಳು ಎದುರಾಗಿವೆ. ರೈನಾ ಮತ್ತು ಭಜ್ಜಿ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ಕಳೆದ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳನ್ನು ಆಡಿತ್ತು. ಆಡಿದ ನಾಲ್ಕರಲ್ಲೂ ಕೂಡ ಗೆದ್ದು ಬೀಗಿತ್ತು. ಅದೇ ಜೋಶ್ ನಲ್ಲಿ ಮುಂಬೈ ತಂಡವಿದೆ. ಇವತ್ತಿನ ಪಂದ್ಯದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಅನ್ನೋ ಲೆಕ್ಕಾಚಾರ ಇಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
1.ಶೇನ್ ವ್ಯಾಟ್ಸನ್ 2. ಅಂಬಾಟಿ ರಾಯುಡು 3. ಫಾಪ್ ಡುಪ್ಲೆಸಿಸ್ 4.ಎಂ ಎಸ್ ಧೋನಿ 5. ಕೇದಾರ್ ಜಾದವ್ 6. ಡ್ವೇಯ್ನ್ ಬ್ರಾವೋ 7.ರವೀಂದ್ರ ಜಡೇಜಾ 8. ಪಿಯೂಸ್ ಚಾವ್ಲಾ 9. ದೀಪಕ್ ಚಹಾರ್ 10. ಶಾರ್ದೂಲ್ ಠಾಕೂರ್ 11. ಇಮ್ರಾನ್ ತಾಹೀರ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
1.ರೋಹಿತ್ ಶರ್ಮ 2. ಕ್ವಿಂಟಾನ್ ಡಿಕಾಕ್ 3. ಸೂರ್ಯಕುಮಾರ್ ಯಾದವ್ 4. ಇಶಾನ್ ಕಿಶಾನ್ 5. ಕಿರಾನ್ ಪೊಲಾರ್ಡ್ 6. ಹಾರ್ದಿಕ್ ಪಾಂಡ್ಯ 7.ಕೃನಾಲ್ ಪಾಂಡ್ಯ 8.ನಥಾನ್ ಕೌಲ್ಟರ್ ನೈಲ್ 9.ರಾಹುಲ್ ಚಹಾರ್ 10.ಟ್ರೆಂಟ್ ಬೌಲ್ಟ್ 11.ಜಸ್ಪ್ರೀತ್ ಬೂಮ್ರಾ
ಇದು ಇವತ್ತಿನ ಪಂದ್ಯದ ಸಂಭಾವ್ಯ ತಂಡಗಳಾಗಿವೆ. ಈ ಪಂದ್ಯವನ್ನು ನೋಡುವುದಕ್ಕೆ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ.