ದೆಹಲಿ: ಪ್ರಧಾನಿ ನರೇಂದ್ರ ಮೋದಿ ಲಡಾಖ್ ಗೆ ಭೇಟಿ ನೀಡಿ, ಅಲ್ಲಿ ಗುಡುಗಿದ ಬೆನ್ನಲ್ಲೇ ಗಲ್ವಾನ್ ಕಣಿವೆಯಿಂದ ಚೀನಾ ಸೈನ್ಯ ಒಂದು ಕಿಲೋಮೀಟರ್ ಹಿಂದಕ್ಕೆ ಸರಿದಿದೆ.. ಜೂನ್ 15ರಂದು ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನೀ ಸೈನಿಕರ ನಡುವೆ ಘರ್ಷಣೆ ನಡೆದಿತ್ತು.
ಮೂಲಗಳ ಪ್ರಕಾರ, ವಿವಾದಿತ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನಿಂದ ಸೈನ್ಯವು ಹಿಂದೆ ಸರಿದಿದೆ. ಇನ್ನು ಸೈನ್ಯದ ಸ್ಥಳಾಂತರವು ಎರಡೂ ಕಡೆಗಳಲ್ಲಿ ನಡೆದಿದೆ. ಜೊತೆಗೆ ಹೆಚ್ಚಿನ ಸಂಘರ್ಷ ತಪ್ಪಿಸಲು ಬಫರ್ ವಲಯವನ್ನು ಕೂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಮಾಂಡರ್ ಮಟ್ಟದ ಮಾತುಕತೆಯ ಒಪ್ಪಂದದಂತೆ ಈ ರೀತಿಯ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಉಭಯ ರಾಷ್ಟ್ರಗಳ ಸೈನಿಕರ ನಡುವೆ ಘರ್ಷಣೆ ನಡೆಯದೇ ಇರಲು ಬಫರ್ ಝೋನ್ ನಿರ್ಮಾಣ ಮಾಡಲಾಗಿದೆ. ಇನ್ನು ಚೀನೀ ಸೈನಿಕರು ನಿರ್ಮಿಸಿದ್ದ ತಾತ್ಕಾಲಿಕ ಟೆಂಟ್ ಗಳನ್ನು ಕೂಡ ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ.