ಬೆಂಗಳೂರು-ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಯಲಹಂಕ ಫ್ಲೈ ಓವರ್ ಗೆ ವೀರ ಸಾವರ್ಕರ್ ಹೆಸರನ್ನೇ ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸಾವರ್ಕರ್ ಜನುಮದಿನಾಚರಣೆಯ ಸಂದರ್ಭದಲ್ಲಿ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಬಾರದು, ಹೆಸರಿಡಬೇಕೆಂಬ ಕೂಗು ಜೋರಾಗಿತ್ತು.
ಹಿಂದೂ ಸಂಘಟನೆಗಳು ಫ್ಲೈ ಓವರ್ ಮೇಲೆ ಹೋಗಿ ಸಾವರ್ಕರ್ ಬೋರ್ಡ್ ನೆಟ್ಟು ಬಂದಿದ್ರು. ಆದರೆ ಈಗ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಅನುಮೋದನೆ ಸಿಕ್ಕಿದೆ.

ಅಂದುಕೊಂಡಿದ್ದನ್ನು ಸಾಧಿಸಿದ ಬಿಜೆಪಿ
ಕಾಂಗ್ರೆಸ್ ನಿಂದ ನಿರ್ಧಾರಕ್ಕೆ ವಿರೋಧ
ಕಳೆದ ತಿಂಗಳು ನಾಮಕರಣಕ್ಕೆ ಸಿದ್ದವಾಗಿದ್ದರಾದ್ರೂ ವಿವಾದ ತಾರಕಕ್ಕೇರಿದ್ದರಿಂದ ಮುಖ್ಯಮಂತ್ರಿಗಳು ತಡೆಯೊಡ್ಡಿದ್ದರು.ಈಗ ಮತ್ತೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಾವರ್ಕರ್ ಹೆಸರಿಡಲು ತೀರ್ಮಾನಿಸಲಾಗಿದೆ.ವಿವಾದ ನಡುವೆ ಸಾವರ್ಕರ್ ಹೆಸರಿಡಲು ಪಾಲಿಕೆನಿರ್ಧರಿಸಿದೆ.

ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಸಾವರ್ಕರ್ ನಮ್ಮ ರಾಜ್ಯಕ್ಕೆ ಏನೂ ಕೊಡುಗೆ ನೀಡಿಲ್ಲ. ಆರ್ ಎಸ್ ಎಸ್ ನ ಒತ್ತಡಕ್ಕೆ ಮಣಿದು ಬಿಜೆಪಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಕೊರೊನಾದ ಸಂಕಷ್ಟದಲ್ಲಿದೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಸುಮೋಟೋ ಆರ್ಡರ್ ಮೂಲಕ ಸಾವರ್ಕರ್ ಹೆಸರಿಡುವ ಅವಶ್ಯಕತೆಯಿತ್ತಾ ಅಂತ ವಾಜೀದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಬದಲು ವಾಜಪೇಯಿ,ಅಬ್ದುಲ್ ಕಲಾಂ ಅವರ ಹೆಸರಿಡಲಿ ಅಂತ ಬಿಬಿಎಂಪಿ ತೀರ್ಮಾನಕ್ಕೆ ಕಿಡಿಕಾರಿದ್ದಾರೆ.
ಯಾರು ಏನೇ ಹೇಳಿದ್ರೂ ಈ ಬಿಜೆಪಿ ಸರ್ಕಾರ ತಾನು ಅಂದುಕೊಂಡಿದ್ದನ್ನು ಸಾಧಿಸುವತ್ತಾ ದಾಪುಗಾಲಿಟ್ಟಿದೆ. ಬಿಬಿಎಂಪಿಯ ಮೂಲಕ ಯಲಹಂಕ ಫ್ಲೈ ಓವರ್ ಗೆ ಶೀಘ್ರವೇ ಸಾವರ್ಕರ್ ನಾಮಕರಣ ಆಗುವ ಸಾಧ್ಯತೆ ಹೆಚ್ಚಿದೆ.