ಶ್ರೀನಗರ : ಭಾರತ-ಚೀನಾ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಲಡಾಕ್ನ ಲೇಹ್ಗೆ ಭೇಟಿಕೊಟ್ಟಿದ್ದಾರೆ. ಗ್ವಾಲನ್ ಕಣಿವೆ ಪ್ರದೇಶದಲ್ಲಿ ಭಾರತ ಚೀನಾ ಗಡಿ ಸಂಘರ್ಷ ಬಳಿಕ ಪ್ರಧಾನಿ ಮೊದಲ ಭೇಟಿ ಇದಾಗಿದ್ದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಪ್ರಧಾನಿ ಲಡಾಕ್ ನ ನಿಮುವಿನಲ್ಲಿರೋ ಫಾರ್ವಾರ್ಡ್ ಎಂಬ ಪ್ರದೇಶದಲ್ಲಿದ್ದಾರೆ. ಅಲ್ಲಿ ಪ್ರಧಾನಿ ಮೋದಿ ಭಾರತೀಯ ಸೇನೆ ಹಾಗೂ ವಾಯುಡೆ. ಜೊತೆಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪಡೆಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.



ಇನ್ನು ಪ್ರಧಾನಿ ಭೇಟಿ ಹಿನ್ನಲೆ ಸಾಕಷ್ಟು ಚರ್ಚೆಗಳು ಆರಂಭಗೊಂಡಿದೆ. ಒಂದುಕಡೆ ಸೇನಾ ಜಮಾವಣೆ ಇನ್ನೊಂದುಕಡೆ ಹೊಸ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿರೋ ಭಾರತ. ಇದರ ಜೊತೆಗೆ ದೇಶದ ಪ್ರಧಾನಿ ಗಡಿ ಸಮಸ್ಯೆ ಇರುವ ಪ್ರದೇಶಕ್ಕೆ ಭೇಟಿನೀಡಿ ಸೈನಿಕರ ಜೊತೆ ನಡೆಸುತ್ತಿರೋ ಸಂವಾದ ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಪ್ರಧಾನಿ ಮೋದಿ ಸೈನಿಕರ ಜೊತೆ ಸಂವಾದದ ಬಳಿಕ ಚೀನಾ ಸೈನಿಕರೊಂದಿಗೆ ಕಾದಾಡಿ ಗಾಯಗೊಂಡಿರೋ ಸೈನಿಕರನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿಯಾಗಲಿದ್ದಾರೆ. ಈಮೂಲಕ ಸೈನಿಕರಿಗೆ ಮನೋಸ್ಥೈರ್ಯ ತುಂಬಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಇನ್ನು ಪ್ರಧಾನಿಗೆ ರಕ್ಷಣಾ ಪ್ರಮುಖ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಸಾಥ್ ನೀಡಿದ್ದಾರೆ.