ಬೆಂಗಳೂರು- ನಟಿ ರಾಗಿಣಿ ದ್ವಿವೇದಿ ಮನೆಯ ಮೇಲೆ ಏಕಾಏಕಿ ಸಿಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಯಲಹಂಕದಲ್ಲಿರುವ ರಾಗಿಣಿಯ ಅನನ್ಯ ಅಪಾರ್ಟ್ ಮೆಂಟ್ ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮನೆಯ ಮೂಲೆ ಮೂಲೆಯನ್ನು ಹುಡುಕಾಡಿದ್ದಾರೆ. ಮನೆಯೊಳಗಿದ್ದ ಚಿಕ್ಕ ಪುಟ್ಟ ವಸ್ತುಗಳನ್ನು ಕೂಡ ಜಾಲಾಡಿದ್ದಾರೆ. ಇದರ ಜೊತೆಗೆ ಡ್ರಗ್ಸ್ ನ ಸುಳಿವೇನಾದ್ರೂ ಸಿಗುತ್ತಾ ಅಂತ, ರಾಗಿಣಿ ಮನೆಯ ಬಾಲ್ಕನಿಯಲ್ಲಿರುವ ಕೈ ತೋಟದಲ್ಲೂ ಹುಡುಕಾಡಿದ್ದಾರೆ.
ರಾಗಿಣಿ ಮನೆಯಲ್ಲಿ ಸಿಕ್ಕಿದ್ದೇನು?
ಮೊಬೈಲ್ ಬಿಟ್ಟು ಬೇರೆನು ಸಿಕ್ಕಿದೆ!
ನಟಿ ರಾಗಿಣಿ ಮನೆಯಲ್ಲಿ ಹುಡುಕಾ3ಟದ ವೇಳೆ ಕೆಲ ಮೊಬೈಲ್ ಗಳು ಸಿಕ್ಕಿದೆ ಎನ್ನಲಾಗಿದೆ. ಅಲ್ಲದೇ, ನಾಲ್ಕೈದು ಮೊಬೈಲ್‌ಗಳನ್ನು ಪಡೆದಿದ್ದು, ಕಾರು ಕೂಡ ವಶಕ್ಕೆ ಪಡೆಯಲಾಗಿದೆ.
ರಾಗಿಣಿ ಮನೆಯಲ್ಲಿ ಸಿಕ್ಕಿಲ್ವಂತೆ ಯಾವುದೇ ಡ್ರಗ್ಸ್ !?
ಬಿಂದಾಸ್ ಆಗಿ ಹಾಯ್ ಹಾಯ್ ಅಂದ ರಾಗಿಣಿ!
ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ಸ್ ಸಂಬಂಧಿಸಿದ ವಸ್ತುಗಳು ಸಿಕ್ಕಿಲ್ಲ ಅನ್ನೋ ಮಾಹಿತಿಗಳು ಹರಿದಾಡುತ್ತಿದೆ. ಮನೆಯಲ್ಲಿ ಅಧಿಕಾರಿಗಳು ನಿರಂತರ ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ. ಇದನ್ನೆಲ್ಲ ಬಹಳ ಕೂಲಾಗಿ ಗಮನಿಸಿದ ರಾಗಿಣಿ, ಬಾಲ್ಕನಿಗೆ ಬಂದು ಮಾಧ್ಯಮಗಳ ಕ್ಯಾಮರಾಗಳಿಗೆ ಹಾಯ್ ಅಂತ ಕೈ ಬೀಸಿದ್ರು. ಈ ಮೂಲಕ ಯಾವುದೇ ದಾಳಿಗೆ ನಾನು ಕುಗ್ಗಿಲ್ಲ ಅಂತ ತೋರಿಸಿದ್ರು. ಈ ಮೂಲಕ ಸಿಸಿಬಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಅಂತ ಹೇಳಲಾಗುತ್ತಿದೆ, ಆದರೆ ಈ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.