ಬೆಂಗಳೂರು-ಕರುನಾಡಿನಲ್ಲಿ ಕೊರೊನಾ ತನ್ನ ಕರಾಳತೆಯನ್ನು ಹೆಚ್ಚಿಸುತ್ತಲೇ ಇದೆ. ಶುಕ್ರವಾರದ ಆರೋಗ್ಯ ಬುಲೆಟಿನ್ ಹೊರಬಿದ್ದಿದ್ದು, ಇಂದು ಬರೋಬ್ಬರಿ 1694 ಕೇಸ್ ಗಳು ದಾಖಲಾಗಿವೆ.
ರಾಜಧಾನಿಯಲ್ಲಿ 994 ಕೇಸ್
ಕೊರೊನಾದ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ರಾಜಧಾನಿಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಆಸ್ಪತ್ರೆಗಳ ಬೆಡ್ ಗಳು ಫುಲ್ ಆಗ್ತಾನೇ ಇದೆ. ಇಂದು ಕೂಡ ರಾಜಧಾನಿಯಲ್ಲಿ 994 ಕೇಸ್ ದಾಖಲಾಗಿದೆ.
2ನೇ ಸ್ಥಾನದಲ್ಲಿದೆ ದಕ್ಷಿಣಕನ್ನಡ 97
ಕರಾವಳಿಯ ದಕ್ಷಿಣ ಕನ್ನಡಲ್ಲಿ ಒಂದು ಕಡೆ ಮಳೆರಾಯ ಆರ್ಭಟ, ಮತ್ತೊಂಡೆದೆ ಡೆಂಗ್ಯೂ ಜ್ವರದ ಮೇಲಾಟ, ಇರದ ನಡುವೆ ಕೊರೊನಾವೂ ಕೂಡ ತನ್ನ ಆಟಾಟೋಪವನ್ನು ಮುಂದುವರೆಸಿದೆ. ದಕ್ಷಿಣ ಕನ್ನಡದಲ್ಲಿಂದು 97 ಕೇಸ್ ದಾಖಲಾಗಿವೆ. ಅದರಲ್ಲೂ ಉಳ್ಳಾಲದಲ್ಲಿ ಏಕಾಏಕಿ ಪರೀಕ್ಷೆ ನಡೆಸಿದವರಲ್ಲೂ ಕೂಡ ಕೊರೊನಾ ಕಂಡುಬಂದಿದ್ದು ಆತಂಕಕ್ಕೆ ಈಡು ಮಾಡಿದೆ. ಕೊರೊನಾ ಈಗ ಹಳ್ಳಿ ಹಳ್ಳಿಗೂ ಹರಡಿದೆ. ಬಳ್ಳಾರಿಯಲ್ಲೂ 97 ಕೇಸ್ ದಾಖಲಾಗಿದೆ.
ರಾಜ್ಯದಲ್ಲಿಂದು ಕೊರೊನಾಗೆ 21 ಬಲಿ
ರಾಜ್ಯದಲ್ಲಿ ಈಗ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದೊಡ್ಡದಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 21, ಈ ಮೂಲಕ ರಾಜ್ಯದಲ್ಲಿ ಈ ವರೆಗೆ ಕೊರೊನಾಗೆ ಬಲಿಯಾದವರು 293 ಜನರು.
ಎಲ್ಲೆಲ್ಲೆ ಎಷ್ಟೆಷ್ಟು ಕರೊನಾ ಸೋಂಕಿತರು

ಆಸ್ಪತ್ರೆಯಿಂದ ಬಿಡುಗಡೆಯಾದವರೆಷ್ಟು ಗೊತ್ತಾ?
ಇಂದು ಕರ್ನಾಟಕದಲ್ಲಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 471 , ಹೀಗಾಗಿ ಈ ವರೆಗೆ ಒಟ್ಟು 8805 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ರಾಜ್ಯದಲ್ಲಿರುವ ಒಟ್ಟು 10608 ಸಕ್ರೀಯ ರೋಗಿಗಳಿದ್ದಾರೆ.
ಬೆಂಗಳೂರಿನಲ್ಲಿ ಬರಬೇಕಿದೆ 11000 ವರದಿ
ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿರುವ ಬೆನ್ನಲ್ಲೇ ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿಯೂ ಬಂದಿದೆ. ಬೆಂಗಳೂರಿನಲ್ಲಿ ಇನ್ನೂ ಕೂಡ ಅಂದಾಜು 11000 ಜನರ ರಿಪೋರ್ಟ್ ಬರಬೇಕಿದೆ. ಲ್ಯಾಬ್ ನಿಂದ ರಿಪೋರ್ಟ್ ಬರುವುದು ತಡವಾಗುತ್ತಿರುವುದರಿಂದ ಹೆಚ್ಚಿನ ವರದಿಗಳು ಇನ್ನೂ ಕೂಡ ಬರಬೇಕಾಗಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೊನಾದ ಆರ್ಭಟ ಹೆಚ್ಚಾಗುತ್ತಲೇ ಇದ್ದು, ನಾವೆಲ್ಲರೂ ಕೂಡ ನಮ್ಮ ಜಾಗೃತೆಯಲ್ಲಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಾಸ್ಕ್ ಇಲ್ಲದೇ ಹೊರಗೆ ಓಡಾಡಬೇಡಿ, ಅಂತರವನ್ನು ಕಾಪಾಡಿ,ಇದು ದಿ ಇಂಡಿಯಾ ಕವರೇಜ್ ಓದುಗರಾದ ನಿಮ್ಮ ನಮ್ಮ ಕಳಕಳಿಯ ಮನವಿ.