ಬೆಂಗಳೂರು-ರಾಜ್ಯದಲ್ಲಿ ಕೊರೊನಾದ ಆರ್ಭಟ ಜೋರಾಗಿಯೇ ಇದೆ. ಇಂದು ರಾಜ್ಯದಲ್ಲಿ ಒಟ್ಟು 1502 ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಅತೀ ಹೆಚ್ಚು 889 ಕೇಸ್ ಗಳು ದಾಖಲಾಗಿವೆ.ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 271, ರಾಜ್ಯದಲ್ಲಿರುವ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 9406 ಪ್ರಕರಣಗಳಿವೆ. ಇಂದು ಒಟ್ಟು 19 ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡದಲ್ಲೂ ಕೊರೊನಾದ ಆರ್ಭಟ
ದಕ್ಷಿಣ ಕನ್ನಡದಲ್ಲಿ ಕೊರೊನಾದ ಆರ್ಭಟ ಜೋರಾಗಿದ್ದು, ಒಟ್ಟು 90 ಪ್ರಕರಣಗಳು ದಾಖಲಾಗಿವೆ. ಪಕ್ಕದ ಉಡುಪಿಯಲ್ಲಿಂದು 14 ಕೇಸ್ ದಾಖಲಾಗಿದೆ.
ಮೈಸೂರು-68
ಬಳ್ಳಾರಿ-65
ಧಾರವಾಡ- 47
ವಿಜಯಪುರ – 39
ರಾಮನಗರ- 39
ಕಲಬುರಗಿ- 38
ಬೀದರ್ -32
ತುಮಕೂರು-26
ಶಿವಮೊಗ್ಗ – 23
ಮಂಡ್ಯ-19
ಉತ್ತರಕನ್ನಡ-17
ಹಾಸನ- 15
ಉಡುಪಿ- 14
ಹೀಗೆ ರಾಜ್ಯದಾದ್ಯಂತ ಕೇಸ್ ದಾಖಲಾಗಿವೆ. ಇದರಲ್ಲಿ ಚಾಮರಾಜನಗರದಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ.