ಬೆಂಗಳೂರು: ವೃದ್ಧರಿಗೆ ಕೊರೊನಾ ವಕ್ಕರಿಸಿತು ಅಂದ್ರೆ ಅವರ ಪಾಲಿಗೆ ಅದು ಯಮಪಾಶವಾಗಿ ಪರಿಣಮಿಸುತ್ತಿದೆ.. 60 ದಾಟಿದವರಿಗೆ ಕೊರೊನಾ ಬಂದ್ರೆ ಸಾವು ಎಂದೇ ಬಿಂಬಿತವಾಗುತ್ತಿದೆ.. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲೊಬ್ಬ 99ರ ಅಜ್ಜಿ ಕೊರೊನಾ ಹೋರಾಟದಲ್ಲಿ ಜಯಿಸಿ ವೈದ್ಯ ಲೋಕಕ್ಕೆ ಅಚ್ಚರಿ ಉಂಟು ಮಾಡಿದ್ದಾರೆ..
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಮಾರ್ಸಿಲಿನ್ ಸಾಲ್ಡಾನಾಗೆ ಜೂನ್ 18 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.. ಹೀಗಾಗಿ ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.. ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲ್ಡಾನಾ, ಕೇವಲ 9 ದಿನದಲ್ಲಿ ಕೊರೊನಾ ವಿರುದ್ಧ ಹೋರಾಡಿ ಡಿಸ್ಚಾರ್ಜ್ ಆಗಿದ್ದಾರೆ.. ತಮ್ಮ 99ನೇ ಹುಟ್ಟುಹಬ್ಬದ ದಿನವೇ ಇವರು ಆಸ್ಪತ್ರೆಗೆ ದಾಖಲಾಗಿದ್ದರು.. ಇನ್ನು ವೃದ್ಧೆ ಇಷ್ಟು ಬೇಗ ಗುಣಮುಖರಾಗಿದ್ದು ವೈದ್ಯ ಲೋಕಕ್ಕೂ ಸಂತಸ ಮೂಡಿಸಿದೆ.. ಇನ್ನು ತಾನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗುವ ವೇಳೆ ಟ್ರಾಮಾ ಕೇರ್ ಸೆಂಟರ್ ನಲ್ಲಿದ್ದ ರೋಗಿಗಳಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದಾರೆ.. ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖರಾಗಿದ್ದು ಇದೇ ಮೊದಲು.