ಬೆಂಗಳೂರು-ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇವತ್ತು ಬರೋಬ್ಬರಿ 918 ಕೇಸ್ ಗಳು ಪತ್ತೆಯಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ ಬರೋಬ್ಬರಿ 596 ಪ್ರಕರಣಗಳು ದಾಖಲಾಗಿವೆ. ಈಗ ಸರ್ಕಾರ ವೀಕೆಂಡ್ ಲಾಕ್ ಡೌನ್ ಮಾಡಲು ಮುಂದಾಗಿದ್ದು, ಮುಂದಿನ ಭಾನುವಾರದಿಂದ ವೀಕೆಂಡ್ ಲಾಕ್ ಡೌನ್ ಮಾಡಲು ಯೋಚಿಸುತ್ತಿದೆ.

SSLC ಪರೀಕ್ಷೆಗಾಗಿ ಲಾಕ್ ಡೌನ್ ಗೆ ಹಿಂದೇಟು ಹಾಕಿದ್ಯಾ ಸರ್ಕಾರ ?
ಮುಂದಿನ ಭಾನುವಾರ ಅಂದ್ರೆ ಎಸ್ ಎಸ್ ಎಲ್ ಎಸಿ ಪರೀಕ್ಷೆ ಮುಗಿದಿರುತ್ತೆ. ಆದ್ರಿಂದಲೇ ಈಗ್ಲೇ ಮುಂದಿನ ವಾರದ ವೀಕೆಂಡ್ ಲಾಕ್ ಡೌನ್ ಸರ್ಕಾರ ಘೋಷಣೆ ಮಾಡಿರುವ ಸಾಧ್ಯತೆಯಿದೆ. ಆದರೆ, ಸರ್ಕಾರ ಲಾಕ್ ಡೌನ್ ಮಾಡುವುದೇ ಹೌದಾದರೇ ಈಗಲೇ ಮಾಡಬಹುದಲ್ಲವೇ, ಲಾಕ್ ಡೌನ್ ಮಾಡಿಯೇ ಪರೀಕ್ಷೆ ಬರೆಸಬಹುದಲ್ಲವೇ…
ಪರೀಕ್ಷೆ ಬೇಕೆ ಬೇಕು ಅಂದ್ರೆ ಲಾಕ್ ಡೌನ್ ನಲ್ಲೇ ಮಾಡಬಹುದಲ್ಲವೇ?
SSLC ಪರೀಕ್ಷೆ ನಡೆಸುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಲಾಕ್ ಡೌನ್ ಮಾಡಿ ಪರೀಕ್ಷೆಗಷ್ಟೇ ಅವಕಾಶ ಮಾಡಿಕೊಟ್ಟರೇ ಮಕ್ಕಳು ಮತ್ತಷ್ಟು ಸೇಫ್ ಆಗಿ ಪರೀಕ್ಷೆ ಬರೆಯಬಹುದು ಏನೋ, ಯಾಕಂದ್ರೆ ಪರೀಕ್ಷೆಗೆ ಬರುವ ಮಕ್ಕಳಿಗೆ ಹೊರಗಿನ ವ್ಯಕ್ತಿಗಳ, ಅಂಗಡಿ ಮುಂಗಟ್ಟುಗಳಲ್ಲಿ ನಿಂತಿರುವವರ ಇತ್ಯಾದಿ ವ್ಯಕ್ತಿಗಳ ಸಂಪರ್ಕ ಆಗುವುದಿಲ್ಲ.
ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರುವುದು ಮತ್ತು ವಾಪಾಸ್ ಮನೆಗೆ ಬಿಡುವುದಕ್ಕೆ ವ್ಯವಸ್ಥಿತವಾದ ಸೌಲಭ್ಯ ಕಲ್ಪಿಸಿದರೆ ಸಾಕಲ್ಲವೇ..ಈಗ ಇರುವ ಪರಿಸ್ಥಿತಿಗಿಂತ ಲಾಕ್ ಡೌನ್ ಮಾಡಿ ಪರೀಕ್ಷೆ ಬರೆಸಿದರೇ ಉತ್ತಮವಲ್ಲವೇ..?

ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ
ಇಷ್ಟಾಗ್ಯೂ, ಇನ್ನುಳಿದ ಪರೀಕ್ಷೆಗಳನ್ನು ರದ್ದು ಮಾಡಿದ್ರೆ ಅಥವಾ ಮುಂದೂಡಿದ್ರೆ ಏನಾಗುತ್ತೆ? ಪೋಷಕರು ಏನು ಹೇಳುತ್ತಾರೆ? ನಮ್ಮ ಓದುಗರಾದ ನಿಮ್ಮ ಅಭಿಪ್ರಾಯವೇನು? ನಮ್ಮ ವೆಬ್ ಸೈಟ್ ಗೆ ಕಾಮೆಂಟ್ ಮಾಡಿ, ವಿದ್ಯಾರ್ಥಿಗಳು,ಪೋಷಕರು, ಶಿಕ್ಷಕರು,ಸಾರ್ವಜನಿಕರು,ನಾಗರಿಕರೆಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮೊಂದಿಗೆ ದಿ ಇಂಡಿಯಾ ಕವರೇಜ್ ಸದಾ ಇರುತ್ತೆ