ಬೆಂಗಳೂರು- ವಿಧಾನ ಪರಿಷತ್ ನಲ್ಲಿ ಶಾಸಕರು ನಡೆಸಿದ ಗಲಾಟೆ ಈಗ ಮತ್ತೆ ಹಳೆ ವಿಷಯವನ್ನು ಪ್ರಸ್ತಾಪಿಸಿದೆ. ಚಿಂತಕರ,ಬುದ್ದಿವಂತರ ಚಾವಡಿ ಎಂದೇ ಕರೆಸಿಕೊಂಡಿರುವ ವಿಧಾನ ಪರಿಷತ್ ನಲ್ಲಿ ಈಗ ಚಿಂತಕರು ಕಡಿಮೆಯಿದ್ದು, ಚಿಂತೆ ಉಂಟುಮಾಡವವರೇ ಹೆಚ್ಚು ಇದ್ದಾರೆ.
ಬರಬರುತ್ತಾ ರಾಜಕಾರಣಿಗಳ ಚೇಲಾಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ವ್ಯಾಪಾರಸ್ಥರೇ ಪರಿಷತ್ ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಅಲ್ಲದೇ, ವಿಧಾನ ಪರಿಷತ್ ಕಲಾಪದಲ್ಲಿ ವಿಸ್ತೃತವಾದ ಚರ್ಚೆ ಆಗಬೇಕಿದೆ. ಆದರೆ ಅದ್ಯಾವುದೂ ಆಗುತ್ತಿಲ್ಲ. ಜೊತೆಗೆ ವಿಧಾನ ಸಭೆಗಿಂತಲೂ ಕಡೆಯಾಗಿ ಗಲಾಟೆ ಮಾಡಿ ದೇಶದಲ್ಲೇ ರಾಜ್ಯ ತಲೆತಗ್ಗಿಸುವಂತಾಗಿದೆ. ಇದರಿಂದ ವಿಧಾನ ಪರಿಷತ್ ಬೇಕಾ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಪರಿಷತ್ ಇದ್ದರೂ ಒಂದೇ ಇರದಿದ್ದರೂ ಒಂದೇ
ಗೋ ಹತ್ಯೆ ಮಸೂದೆ ಪಾಸ್ ಆಗದಿದ್ದರೆ ಮತ್ತೆ ಸಭೆಗೆ
ವಿಧಾನ ಸಭಾ ಅಧಿವೇಶನದ ವೇಳೆ ಗೋಹತ್ಯೆ ನಿಷೇಧ ಮಸೂದೆ ಪಾಸ್ ಆಗಿ ಪರಿಷತ್ ಗೆ ಬಂದಿದೆ. ಪರಿಷತ್ ನಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಿರುವುದರಿಂದ ಪಾಸ್ ಆಗುವುದು ಅನುಮಾನ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ ಬಿಜೆಪಿ ಮುಖಂಡ ಸಿ ಟಿ ರವಿ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಪಾಸ್ ಆಗದಿದ್ದರೆ ನಾವು ಮತ್ತೆ ವಿಧಾನಸಭೆಯಲ್ಲಿ ಪಾಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ರು. ಇದರಿಂದ ಪರಿಷತ್ ನ ಅಗತ್ಯವೇ ಇಲ್ಲ ಅನ್ನೋದು ಗೊತ್ತಾಗಿದೆ.
ಇದರ ಜೊತೆಗೆ ದೆಹಲಿಯಲ್ಲಿ ಮಾತನಾಡಿರುವ ಸಿಟಿ ರವಿ ಗಲಾಟೆಯ ನಂತರ ವಿಧಾನಪರಿಷತ್ ಬೇಕಾ ಅನ್ನೋ ಪ್ರಶ್ನೆ ಎದ್ದಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ರು. ಹಾಗಾದ್ರೆ ವಿಧಾನ ಪರಿಷತ್ ನಿಂದ ಆಗುವ ನಷ್ಟವೇನು ಅಂತ ಲೆಕ್ಕಹಾಕಿದ್ರೆ, ವಿಧಾನ ಪರಿಷತ್ ಕಲಾಪದ ವೇಳೆ ಕೋಟಿಯಷ್ಟು ಖರ್ಚಾಗುತ್ತೆ.
ವಿಧಾನಪರಿಷತ್ ನಲ್ಲಿ 75 ಸದಸ್ಯರಿದ್ದಾರೆ. ಅವರಿಗೆ ತಿಂಗಳ ಭತ್ಯೆ, ಪ್ರವಾಸ ವೆಚ್ಚ, ಊಟದ ವೆಚ್ಚ ಇತ್ಯಾದಿಗಳನ್ನು ಲೆಕ್ಕ ಹಾಕಿದ್ರೆ ಕೆಲವು ಕೋಟಿಗಳಾಗುತ್ತೆ. ಜನರ ತೆರಿಗೆ ಹಣದಲ್ಲಿ ಇವರೆಲ್ಲ ಸಂಬಳ ಪಡೆಯುತ್ತಿದ್ದಾರೆ. ಹೀಗಿರುವಾಗ ಜನರೂ ಕೂಡ ವಿಧಾನ ಪರಿಷತ್ ಬೇಕಾ ಅನ್ನೋ ಪ್ರಶ್ನೆ ಹುಟ್ಟು ಹಾಕಿ, ಚರ್ಚಿಸುತ್ತಿದ್ದಾರೆ.