ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಭಾರೀ ಮಹತ್ವ ಇದೆ.. ವೀಳ್ಯದೆಲೆಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ ಎಂಬ ನಂಬಿಕೆಯೂ ಇದೆ.. ಎಲ್ಲಾ ಶುಭಸಮಾರಂಭಗಳಿಗೂ ಇದು ಬೇಕೇ ಬೇಕು..ವೀಳ್ಯದೆಲೆಯಲ್ಲಿ ಅತ್ಯಂತ ಅಮೂಲ್ಯವಾದ ಗುಣಗಳು ಇರುವುದರಿಂದ ಇದರ ಬಳಕೆಗೆ ಮಹತ್ವ ಇದೆ.. ಹಾಗಾದ್ರೆ ವೀಳ್ಯದೆಲೆಯಲ್ಲಿ ಇರುವ ಔಷಧೀಯ ಗುಣಗಳು ಏನು ಎಂಬುವುದನ್ನು ನಾವು ತಿಳಿದುಕೊಳ್ಳೋಣ..
ನೆಗಡಿಗೆ ವೀಳ್ಯದೆಲೆ ರಾಮಬಾಣ..!
ಒಂದು ವೀಳ್ಯದೆಲೆ, ನಾಲ್ಕು ತುಳಸಿ ಎಲೆ, ಎರಡು ದೊಡ್ಡ ಪತ್ರೆ ಎಲೆ ಎಲ್ಲವನ್ನು ಜಜ್ಜಿ ರಸ ತೆಗೆದು, ರಸವನ್ನು ಜೇನು ತುಪ್ಪದ ಜೊತೆ ಸೇವಿಸಿದರೆ ನೆಗಡಿ ನಿವಾರಣೆಯಾಗುತ್ತದೆ..
ಕಫ ಸಹಿತ ಕೆಮ್ಮಿಗೆ ವೀಳ್ಯದೆಲೆ ಮದ್ದು..!
ಒಂದು ವೀಳ್ಯದೆಲೆಯಲ್ಲಿ ನಾಲ್ಕೈದು ತುಳಸಿ ಎಲೆ, ಒಂದು ಲವಂಗ, ಕಡಲೆ ಬೇಳೆಯಷ್ಟು ಪಚ್ಚ ಕರ್ಪೂರ ಇಟ್ಟುಕೊಂಡು ಜಗಿದು ತಿನ್ನುವುದರಿಂದ ಶ್ವಾಸಕೋಶ ಶುದ್ಧವಾಗಿ ಕಫ ಕರಿಗಿ ಕೆಮ್ಮು ನಿವಾರಣೆಯಾಗುತ್ತದೆ.. ಎರಡು ಬಾರಿ ಕನಿಷ್ಠ ನಾಲ್ಕೈದು ದಿನ ಮಾಡಬೇಕು.
ಉಬ್ಬಸ ಹಾಗೂ ನಾಯಿಕೆಮ್ಮಿಗೆ ರಾಮಬಾಣ..!
ಒಂದು ಚಮಚ ವೀಳ್ಯದೆಲೆ ರಸ, ಒಂದು ಚಮಚ ಬಿಳಿ ಈರುಳ್ಳಿ, ಅರ್ಧ ಚಮಚ ಜೇನುತುಪ್ಪದ ಜೊತೆ ಒಂದು ಚಿಟಿಕೆ ಇಂಗನ್ನು ಬೆರೆಸಿ ಸೇವಿಸುವುದರಿಂದ ಉಬ್ಬಸ ಹಾಗೂ ನಾಯಿಕೆಮ್ಮು ಶಮನವಾಗುತ್ತದೆ..
ಚಿಕ್ಕ ಮಗುವಿನ ಹೊಟ್ಟೆ ನೋವಿಗೆ ವೀಳ್ಯದೆಲೆ ಪರಿಹಾರ
ಮಗು ಅಳುತ್ತಿದ್ದಾಗ ಹೊಟ್ಟೆ ಮುಟ್ಟಿ ನೋಡಿ, ಹೊಟ್ಟೆ ಉಬ್ಬರಿಸಿಕೊಂಡಿದ್ದರೆ, ವೀಳ್ಯದೆಲೆ ಮೇಲೆ ಎಣ್ಣೆ ಸವರಿ ಹೊಟ್ಟೆಗೆ ಶಾಖ ಕೊಟ್ಟರೆ ಹೊಟ್ಟೆಯಲ್ಲಿರುವ ವಾಯು ಹೊರಗೆ ಹೋಗುತ್ತದೆ. ಮಗು ಆರಾಮವಾಗುತ್ತದೆ.
ವೀಳ್ಯದೆಲೆಯಿಂದ ಹಲ್ಲು ನೋವು ನಿವಾರಣೆಯಾಗುತ್ತದೆ..!
ಒಂದು ಪಾತ್ರೆಗೆ ನೀರು ಹಾಕಿ 7ರಿಂದ8 ವೀಳ್ಯದೆಲೆ ಹಾಕಿ ಚೆನ್ನಾಗಿ ಕುದಿಸಿ ಎಲೆ ತೆಗೆದು ಹಾಕಿ ಆ ನೀರಿನಲ್ಲಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಹಾಗೂ ವಸಡು ನೋವು ನಿವಾರಣೆಯಾಗುತ್ತದೆ.
ಕೂದಲು ಉದುರುವುದಕ್ಕೆ ವೀಳ್ಯದೆಲೆ ರಾಮಬಾಣ..!
ವೀಳ್ಯದೆಲೆಯನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಹಾಗೂ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ಗರ್ಭಾಶಯದ ತೊಂದರೆಗೆ ವೀಳ್ಯದೆಲೆ ಪರಿಹಾರ..!
ಅರ್ಧ ಚಮಚ ಸೋಂಪುಕಾಳು ವೀಳ್ಯದೆಲೆ ಜೊತೆ ಇಟ್ಟು ಅಗಿದು ತಿನ್ನುವುದರಿಂದ ಗರ್ಭಾಶಯದ ತೊಂದರೆಗಳು ನಿವಾರಣೆಯಾಗುತ್ತದೆ.. ಹಾಲುಣಿಸುವ ತಾಯಂದಿರಿಗೂ ಇದು ಸಾಕಷ್ಟು ಸಹಾಯವಾಗುತ್ತದೆ.