ತಿರುವನಂತಪುರಂ: ದೇಶಾದ್ಯಂತ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ.. ಹೀಗಾಗಿ ಈ ವರ್ಷ ನಡೆಯುವ ಶಬರಿಮಲೆ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿ ಕೇರಳ ಸರ್ಕಾರ ಆದೇಶವನ್ನು ಹೊರಡಿಸಿದೆ..

ಜೂನ್ 11ರಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜೂನ್ 19ರಿಂದ ಶಬರಿಮಲೆ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.. ಇವತ್ತು ನಡೆದ ಗೌಪ್ಯ ಸಭೆಯಲ್ಲಿ ಶಬರಿಮಲೆ ದೇವಸ್ಥಾನದ ತಂತ್ರಿ ಕಂದರರು ಮಹೇಶ್ ಮೋಹನರು ಹಾಗ ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು ಭಾಗಿಯಾಗಿದ್ದರು..

ಇನ್ನು ತಿಂಗಳ ಪೂಜೆಗಾಗಿ ಜೂನ್ 14ರಿಂದ ದೇವಸ್ಥಾನವನ್ನು ಓಪನ್ ಮಾಡಲು ಈ ಹಿಂದೆ ನಿರ್ಧಾರ ಮಾಡಲಾಗಿತ್ತು.. ಜೂನ್ 10ರಂದು ದೇವಸ್ಥಾನದ ತಂತ್ರಿ ಕಂದರರು ಮಹೇಶ್ ಮೋಹನರು ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು ಉನ್ನತ ಮಟ್ಟದ ಸಭೆ ನಡೆಸುವಂತೆ ಪತ್ರದ ಮೂಲಕ ತಿಳಿಸಿದ್ದರು.. ಜೊತೆಗೆ ಈ ಪತ್ರದಲ್ಲಿ ಯಾತ್ರಿಕರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಪತ್ರದಲ್ಲಿ ಹೇಳಿದ್ದರು.. ಹೀಗಾಗಿ ಇವತ್ತು ಸಭೆ ನಡೆಸಿ ಆಡಳಿತ ಮಂಡಳಿ ನಿರ್ಧಾರವನ್ನು ಕೈಗೊಂಡಿದೆ..