ಬೆಂಗಳೂರು: ಭಾರತದ ವೃತ್ತಿಪರ ಗಾಲ್ಫರ್ ಶರ್ಮಿಳಾ ನಿಕೊಲೆಟ್ ಅಪಘಾತವಾಗಿದೆ. ಈ ವೇಳೆ ಶರ್ಮಿಳಾ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಸರ್ಜರಿ ಮಾಡಲಾಗಿದೆ. .ಯಶಸ್ವಿಯಾಗಿ ಸರ್ಜರಿ ಮಾಡಿದ ನಂತರ ಶರ್ಮಿಳಾ ನಿಕೊಲೆಟ್ ಸಾಮಾಜಿಕ ಜಾಲ ತಾಣದಲ್ಲಿ ತನಗಾದ ಅಪಘಾತದ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ ಆದಷ್ಟು ಬೇಗ ಚೇತರಿಸಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಸದಾ ತನಗೆ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಅಂತನೂ ಬರೆದುಕೊಂಡಿದ್ದಾರೆ. ಶರ್ಮಿಳಾ ಬೇಗ ಚೇತರಿಸಿಕೊಳ್ಳಲಿ, ಮತ್ತೆ ಗಾಲ್ಫ್ ನಲ್ಲಿ ಗೆಲುವಿನ ಲಯಕ್ಕೆ ಮರಳಲಿ ಅಂತ ನಾವು ಹಾರೈಸೋಣ.