ನೇಪಾಳ-ಚೀನಾದ ಜೊತೆ ಸೇರಿಕೊಂಡು ಭಾರತವನ್ನು ಕುಟುಕುತ್ತಿರುವ ನೇಪಾಳ ಈಗ ಭಾರತೀಯರ ನಂಬಿಕೆಯ ಮೇಲೆ ಆಟವಾಡಲು ಹೊರಟಿದೆ. ನೇಪಾಳದ ಪ್ರಧಾನಿ ಕೆ ಪಿ ಶರ್ಮ ಓಲಿ, ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆ ಅಲ್ಲ, ರಾಮ ನೇಪಾಳದಲ್ಲೇ ಹುಟ್ಟಿದ್ದು ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ರಾಮನ ಜನ್ಮಸ್ಥಾನದ ಬಗ್ಗೆ ಓಲಿ ಹೇಳಿದ್ದೇನು?
ಭಾರತದಲ್ಲಿ ಅಯೋಧ್ಯೆಗಾಗಿ ಬಹುವರ್ಷಗಳ ಜಗಳವಾಗಿತ್ತು. ಆದರೆ ರಾಮನು ನೇಪಾಳಿ, ಆತನ ನೇಪಾಳದಲ್ಲೇ ಹುಟ್ಟಿದ್ದು, ನೇಪಾಳದ ವೆಸ್ಟ್ ಬಿಗ್ರುಂಜ್ ನಲ್ಲಿರುವ ಥೋರಿ ಎಂಬಲ್ಲಿ ರಾಮನು ಹುಟ್ಟಿದ್ದು, ಆದರೆ ಭಾರತ ರಾಮನು ಭಾರತದಲ್ಲೇ ಹುಟ್ಟಿದ್ದು ಅಂತ ಹೇಳುತ್ತಿದೆ ಎಂದು ಓಲಿ ವಿವಾದವೆಬ್ಬಿಸಿದ್ದಾರೆ.

ಮಾತಿನಲ್ಲೇ ಸಿಕ್ಕಿಬಿದ್ದ ಕೆ ಪಿ ಶರ್ಮ ಓಲಿ!
ನೇಪಾಳದ ಸೀತೆಗೆ ಭಾರತದ ರಾಮನೊಂದಿಗೆ ಮದುವೆ!
ನೇಪಾಳದಲ್ಲೂ ಇದ್ಯಂತೆ ಈ ನಂಬಿಕೆ
ರಾಮನು ಹುಟ್ಟಿದ್ದು ನೇಪಾಳದಲ್ಲೇ ಅಂತ ಹೇಳುವ ಓಲಿ, ತನ್ನ ಮಾತು ಮುಂದುವರೆಸಿ, ನೇಪಾಳದಲ್ಲಿಯೂ ಸೀತಾಮಾತೆ ನೇಪಾಳದವಳಾಗಿದ್ದು, ಭಾರತದ ರಾಜ ರಾಮನನ್ನು ಮದುವೆಯಾದರು ಅನ್ನುವ ನಂಬಿಕೆ ಇದೆ. ಆದರೆ ಇದು ಸಾಧ್ಯವಿಲ್ಲ, ಯಾಕಂದ್ರೆ ಆಗಿನ ಕಾಲದಲ್ಲಿ ಸಂವಹನ ಸಾಧನಗಳು ಇರಲಿಲ್ಲ, ಆದ್ದರಿಂದ ದೂರದ ನೇಪಾಳ ಮತ್ತು ಭಾರತದ ಅಯೋಧ್ಯ ನಡುವೆ ಸಂಪರ್ಕ ಹೇಗಾಯ್ತು ಅಂತ ಪ್ರಶ್ನಿಸಿದ್ದಾರೆ.
ಭಾರತ-ನೇಪಾಳದ ಜನರ ನಂಬಿಕೆಯೊಂದಿಗೆ ಆಟ
ನೇಪಾಳ ಪ್ರಧಾನಿಯ ಮಾತಿಗೆ ಕಟು ಟೀಕೆ!
ನೇಪಾಳದ ಪ್ರಧಾನಿಯ ಮಾತು ಭಾರತ ಮತ್ತು ನೇಪಾಳದಲ್ಲೂ ಕೂಡ ಅಚ್ಚರಿಗೆ ಕಾರಣವಾಗಿದೆ. ನೇಪಾಳದ ಜನರು ಕೂಡ ರಾಮನು ಅಯೋಧ್ಯೆಯಲ್ಲೇ ಹುಟ್ಟಿದ್ದು ಅಂತ ನಂಬಿ ಪೂಜಿಸುತ್ತಾರೆ. ಭಾರತೀಯರು ಆರಾಧಿಸುತ್ತಾರೆ. ಹೀಗಿರುವಾಗ ಈಗ ಏಕಾಏಕಿ ಓಲಿ, ರಾಮನ ಜನ್ಮಸ್ಥಾನದ ಬಗ್ಗೆಯೇ ವಿವಾದ ಸೃಷ್ಟಿಸಿರುವುದು ಬಹುಸಂಖ್ಯಾತ ರಾಮ ಭಕ್ತರ ನಂಬಿಕೆಯೊಂದಿಗೆ ಆಟ ಆಡುತ್ತಿರುವಂತಿದೆ.
ಈ ಕುರಿತು ಮಾತನಾಡಿರುವ ಬಿಜೆಪಿಯ ವಕ್ತಾರ ಬಿಜಯ್ ಶೋಂಕರ್ ಶಾಸ್ತ್ರಿ, ಎಡಪಕ್ಷಗಳು ನೇಪಾಳದಲ್ಲಿ ಮಾತ್ರವಲ್ಲ, ಭಾರತದಲ್ಲೂ ಕೂಡ ಜನರ ನಂಬಿಕೆಗಳ ಜೊತೆ ಆಟವಾಡುತ್ತಿದೆ. ಈಗ ರಾಮನ ವಿಚಾರದಲ್ಲಿ ವಿವಾದವೆಬ್ಬಿಸಿದ್ದಾರೆ. ನಮ್ಮ ನಂಬಿಕೆಯನ್ನು ನೇಪಾಳದ ಪ್ರಧಾನಿ ಮಾತ್ರವಲ್ಲ, ಯಾರೇ ಬಂದರೂ, ಸುಳ್ಳು ಮಾಡುವುದಕ್ಕೆ ಸಾಧ್ಯವಿಲ್ಲ ಎಂತು ಹೇಳಿದ್ದಾರೆ.

ನೇಪಾಳದ ಪ್ರಧಾನಿಯ ಕಾರ್ಯವೈಖರಿಯೇ ವಿವಾದಾತ್ಮಕ
ನೇಪಾಳದ ಪ್ರಧಾನಿಯ ವಿರೋಧಿ ಅಲೆ ಆ ದೇಶದಲ್ಲಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಈಗ ಓಲಿ ಜನರ ನಂಬಿಕೆಗಳನ್ನೇ ಪ್ರಶ್ನಿಸುವಂತೆ ಮಾಡಿರುವುದು, ಮತ್ತಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದು ನೇಪಾಳದಲ್ಲೂ ಓಲಿಗೆ ಹಿನ್ನಡೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.