ಬೆಂಗಳೂರು-ಸಾರಿಗೆ ನೌಕರರ ಮುಷ್ಕರ ಅಂತ್ಯವಾಯ್ತು, ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ರಾಜ್ಯ ಸರ್ಕಾರವೂ ಒಪ್ಪಿತ್ತು. ನೌಕರರ ಪರವಾಗಿ ಸಚಿವರುಗಳೊಂದಿಗೆ ಮಾತನಾಡಿರುವ ಮುಖಂಡರು, ವಿಕಾಸಸೌಧದಲ್ಲಿ ಮುಷ್ಕರ ಕೈ ಬಿಡುವುದಕ್ಕೆ ಒಪ್ಪಿಕೊಂಡಿದ್ದರು. ಆದರೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಕೆಲವೇ ಕ್ಷಣಗಳಲ್ಲಿ ಎಲ್ಲಾವೂ ಉಲ್ಟಾ ಅಯ್ತು.
ಸರ್ಕಾರಿ ನೌಕರರನ್ನಾಗಿ ಪರಿಗಣಿಸುವವರೆಗೂ ಕೂಡ ಮುಷ್ಕರ ಕೈಬಿಡಲ್ಲ ಅಂತ ಘೋಷಣೆ ಮಾಡಿದ್ರು. ಇದು ಮತ್ತೆ ಟ್ವಿಸ್ಟ್ ನೀಡಿತು. ಅಲ್ಲದೇ ಸರ್ಕಾರಕ್ಕೆ ಮತ್ತೆ ಇದೊಂದು ದೊಡ್ಡ ಸಮಸ್ಯೆಯಾಗಿ ಗೋಚರವಾಯ್ತು.
ನೌಕರರ ದಾರಿ ತಪ್ಪಿಸಿದ್ರಾ ಕೋಡಿಹಳ್ಳಿ ಚಂದ್ರಶೇಖರ್?
ಇದು ಈಗ ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ನೌಕರರ ಪರವಾಗಿ ಸಚಿವರೊಂದಿಗೆ ಮಾತುಕತೆ ನಡೆಸಿದವರು ಮುಷ್ಕರ ಕೈ ಬಿಡುವ ಒಪ್ಪಿಗೆಗೆ ಸ್ಪಂಧಿಸಿದವರನ್ನು ಕೋಡಿಹಳ್ಳಿಯವರೇ ದಾರಿ ತಪ್ಪಿಸಿದ್ದಾರೆ ಅಂತ ಸಿಎಂ ಸೇರಿದಂತೆ ಸರ್ಕಾರದ ಸಚಿವರುಗಳು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದನ್ನು ನೋಡಿಯೂ ಕೂಡ ಕೋಡಿಹಳ್ಳಿಯವರು ನೌಕರರನ್ನು ಎತ್ತಿಕಟ್ಟುತ್ತಿದ್ದಾರೆ. ಇದೇ ಸಮಸ್ಯೆಗೆ ಕಾರಣ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ನೌಕರರ ನಡುವೆ ಶುರುವಾಗಿದ್ಯಾ ಗೊಂದಲ?
ಎಸ್ಮಾದ ಭೀತಿಯಲ್ಲಿದ್ದಾರಾ ನೌಕರರು?
ಸರ್ಕಾರ ಕರೋನಾದಿಂದ ಸಾವನ್ನಪ್ಪಿದವರಿಗೆ 30 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿತ್ತು. ಜೊತೆಗೆ ವೇತನ ಹೆಚ್ಚಳದ ಭರವಸೆಯನ್ನೂ ನೀಡಿತ್ತು, ಹೀಗೆ ಹಲವು ಬೇಡಿಕೆಗಳಿಗೆ ಸ್ಪಂಧನೆ ನೀಡಿತ್ತು. ಆದರೆ ಎಲ್ಲದ್ದಕ್ಕೂ ಓಕೆ ಅಂದವರು ಮತ್ತೆ ಉಲ್ಟಾ ಹೊಡಿದಿದ್ದರಿಂದ , ಪ್ರತಿಭಟನೆಗೆ ಸಾಥ್ ನೀಡಿದವರಲ್ಲೇ ಗೊಂದಲವನ್ನು ಉಂಟುಮಾಡಿದೆ.
ಎಸ್ಮಾ ಜಾರಿಯಾದರೆ ಮುಂದೆ ಕೆಲಸಕ್ಕೆ ತೊಂದರೆಯುಂಟಾಗುತ್ತೆ. ಅಲ್ಲದೇ ಕರೊನಾದ ನಡುವೆ ತಮ್ಮ ಕುಟುಂಬಗಳು ಸಂಕಷ್ಟಕ್ಕೆ ಈಡಾಗುತ್ತವೆ. ಸರ್ಕಾರ ಕರೊನಾದ ಸಮಯದಲ್ಲೂ ಸಂಬಳ ಕೊಟ್ಟಿದೆ. ಅಲ್ಲದೇ, ಈಗಲೂ ಕೂಡ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. ಹೀಗಿರುವಾಗ ಮತ್ತೆ ಉಲ್ಟಾ ಹೊಡೆದಿದ್ದರಿಂದ ನೌಕರರ ನಡುವೆಯೇ ಗೊಂದಲಕ್ಕೆ ಕಾರಣವಾಗಿದೆ.
ಅಲ್ಲದೇ, ನೌಕರರ ಸಂಘಟನೆಗಳಲ್ಲೂ ಕೂಡ ಭಿನ್ನ ರಾಗ ಕೇಳಿಬರುತ್ತಿದೆ. ಈಗ ಬಂದ್ ಮುಷ್ಕರ ಸಂಪೂರ್ಣವಾಗಿ ಕೋಡಿಹಳ್ಳಿಯವರ ಮೇಲೆ ಅವಲಂಬಿತವಾಗಿದ್ದು, ಕಳೆದ ಮೂರು ದಿನಗಳಿಂದ ಆಗುತ್ತಿರುವ ತೊಂದರೆಗಳಿಗೆ ಅವರೇ ಪ್ರಮುಖ ಕಾರಣ ಅಂತ ಬಿಂಬಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗುತ್ತೆ, ನೌಕರರ ಬಿಗಿಪಟ್ಟು ಯಾರನ್ನು ಸಂಕಟಕ್ಕೆ ಸಿಲುಕಿಸುತ್ತೆ ಕಾದು ನೋಡ್ಬೇಕಿದೆ.