ಬೆಂಗಳೂರು: ಹೇಳುವುದು ಆಚಾರ ಮಾಡುವುದು ಅನಾಚಾರ ಎಂಬ ಗಾದೆ ಈ ಕಾಂಗ್ರೆಸ್ ನಾಯಕರನ್ನು ನೋಡಿಯೇ ಹೇಳಿರಬೇಕು ಅಂತ ಅನ್ನಿಸುತ್ತೆ.. ಯಾಕಂದರೆ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರು ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.. ಇವತ್ತು ಬೆಂಗಳೂರಿನಲ್ಲಿ ಕೈ ನಾಯಕರು ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಕೈಗೊಂಡಿದ್ದರು.. ಈ ವೇಳೆ ನಾಯಕರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ..

ಕೊರೊನಾ ವೈರಸ್ ಹರಡದಂತೆ ತಡೆಗಟ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರೂ ಕೂಡ ಕೈ ನಾಯಕರು ಇದ್ಯಾವುದರ ಪರಿವೆ ಇಲ್ಲದಂತೆ ವರ್ತಿಸಿದ್ದಾರೆ.. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆರಂತಹ ಘಟಾನುಘಟಿ ನಾಯಕರಿದ್ದರೂ ಕೂಡ ನಿಯಮವನ್ನು ಉಲ್ಲಂಘನೆ ಮಾಡಿ ಜನ ಜಾತ್ರೆ ಮಾಡಿದ್ದಾರೆ..