ಬೆಂಗಳೂರು-ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಸರ್ಕಾರ ಪ್ರಮುಖ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದೆ. ಆರನೇ ವೇತನ ಜಾರಿಗೆ ಸಮ್ಮತಿ ಸೂಚಿಸಿದ ಸರ್ಕಾರ, ನೌಕರರ ಮನವೋಲಿಸುವಲ್ಲಿ ಸಫಲವಾಗಿದೆ.
ಇಂದು ರಾತ್ರಿಯಿಂದಲೇ ಓಡಲಿದೆ ಸರ್ಕಾರಿ ಬಸ್
ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಬ್ರೇಕ್ ಬಿದ್ದಿದೆ. ಸಾರಿಗೆ ನೌಕರರರ ಮುಖಂಡರು ಮತ್ತು ಯೂನಿಯರ್ ಲೀಡರ್ಸ್ ಜೊತೆಗಿನ ಮಾತುಕತೆ ಮುಕ್ತಾಯವಾಗಿದ್ದು, ಸಭೆಯಲ್ಲಿ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಮ್ಮತಿ
ಕರೊನಾದಿಂದ ಮೃತಪಟ್ಟವರಿಗೆ ಮೂವತ್ತು ಲಕ್ಷ
ದೊಡ್ಡ ಬೇಡಿಕೆ ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸಲು ಒಪ್ಪಿಗೆ
ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಮಾಡಿದೆ. 2020ರಲ್ಲಿ ಹೆಚ್ಚಾದ ವೇತನವನ್ನು ಪಾವತಿಸುವ ಬಗ್ಗೆಯೂ ಸಕಾರಾತ್ಮಕ ಮಾತುಕತೆ ನಡೆದಿದೆ.. ಜೊತೆಗೆ ಕರೊನಾದಿಂದ ವಿಧಿವಶರಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ನೀಡುವ ಬೇಡಿಕೆಗೂ ಒಪ್ಪಿಗೆ ಸೂಚಿಸಿದೆ.
ಎನ್ ಐ ಎನ್ ಸಿ ಯೋಜನೆ ರದ್ದು ಪಡಿಸುವ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ. ಆರನೇ ವೇತನ ಜಾರಿಗೆ ತರುವುದಕ್ಕೂ ಕೂಡ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸಾರಿಗೆ ನೌಕರರ ಕಿರುಕುಳ ತಡೆಯಲು ವಿಶೇಷ ಕ್ರಮ ತರಲು ಒಪ್ಪಿಗೆ. ತರಭೇತಿ ಅವಧಿ ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅಂತರ ನಿಗಮ ವರ್ಗಾವಣೆ ಮಾಡುವಾಗ ಆಗುವ ತೊಂದರೆಗಳನ್ನು ಸರಿಪಡಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗಿಲ್ಲ ಅಸ್ತು
ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗೆ ಸರ್ಕಾರ ಒಪ್ಪುತ್ತಿಲ್ಲ. ಇದು ಸರ್ಕಾರ ಬೊಕ್ಕಸಕ್ಕೆ ಹೊರೆಯಾಗುತ್ತೆ. ಅಲ್ಲದೇ ಒಂದು ಅಂದಾಜಿನ ಪ್ರಕಾರ ಒಂದು ತಿಂಗಳ ಖರ್ಚು ಈಗ ಅಂದಾಜು 400 ಕೋಟಿಯಷ್ಟಾದ್ರೆ, ಸರ್ಕಾರಿ ನೌಕರರನ್ನಾಗಿ ಮಾಡಿದ್ರೆ 3000 ಕೋಟಿಗೂ ಅಧಿಕ ಹಣ ಬೇಕಾಗುತ್ತೆ. ಆದ್ದರಿಂದ ಈ ಹೈ ರಿಸ್ಕ್ ತೆಗೆದುಕೊಳ್ಳಲು ಸರ್ಕಾರ ಮುಂದಾಗಿಲ್ಲ. ಈ ಎಲ್ಲಾ ಮಾತುಕತೆ ಯಶಸ್ವಿಯಾಗಿದ್ದು, ಇವತ್ತು ರಾತ್ರಿಯಿಂದಲೇ ಬಸ್ ಓಡಾಟ ಶುರುವಾಗಲಿದೆ.