ಬೆಂಗಳೂರು: ಡ್ರಗ್ಸ್ ಮಾಫಿಯಾ ಸ್ಯಾಂಡಲ್‌ವುಡ್‌ನ ಮುಖವಾಡ ಬಯಲು ಮಾಡುತ್ತಿದೆ. ಯುವನಟರು ಡ್ರಗ್ಸ್ ಜಾಲಕ್ಕೆ ಬಿದ್ದಿದ್ದಾರೆ ಅನ್ನುವುದರ ಜೊತೆ ಜೊತೆಗೆ ನಟರ ಸಿಕ್ಸ್ ಪ್ಯಾಕ್ ಹಿಂದೆ ಸ್ಟೇರಾಯ್ಡ್ ಇದೆಯಾ ಅನ್ನುವ ಅನುಮಾನವೂ ಕೂಡ ಹೆಚ್ಚಾಗಿದೆ. ಹಾಗಾದ್ರೆ, ದೇಹದ ಪ್ಯಾಕ್ ಮೋಹದ ಹಿಂದೆ ಡ್ರಗ್ಸ್ ಜಾಲದ ಕೈವಾಡ ಇದ್ಯಾ ಅನ್ನುವ ಅನುಮಾನ ಹೆಚ್ಚಾಗಿದೆ.
ಆ ನಟನ ಸಾವಿನ ಹಿಂದಿದ್ಯಾ ಮಾದಕ ವಸ್ತು?
ಆ ಅಪಘಾತಗಳಿಗೂ ಕಾರಣವಾಯ್ತಾ ಡ್ರಗ್ಸ್ ?
ಸ್ಯಾಂಡಲ್‌ವುಡ್‌ನಲ್ಲಿ ಹಲವು ಆಘಾತಗಳಿಗೆ ಡ್ರಗ್ಸ್ ಕಾರಣವಾಗಿದ್ಯಾ ಅನ್ನುವ ಅನುಮಾನ ಕಾಡುತ್ತಿದೆ. ಇತ್ತೀಚಿಗೆ ನಿಧನರಾದ ನಟರೊಬ್ಬರ ಸಾವಿನ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಆ ಯುವನಟನ ಸಾವಿನ ಹಿಂದೆಯೂ ಡ್ರಗ್ಸ್ ಮಾಫಿಯಾದ ಕೈವಾಡವಿದೆಯಾ ಅನ್ನೋ ಅನುಮಾನಗಳು ವ್ಯಕ್ತವಾಗುತ್ತಿವೆ.
ಅಲ್ಲದೇ, ಸ್ಯಾಂಡಲ್ ವುಡ್ ನಟ, ನಟಿಯರ ಕಾರು ಅಪಘಾತ ಪ್ರಕರಣಗಳು ಈಗ ಅಚ್ಚರಿಗೆ ಕಾರಣವಾಗಿದೆ. ರಾತ್ರಿ 2 ಗಂಟೆಯ ನಂತರ ಬೆಳಗ್ಗಿನ ಜಾವ 5 ಗಂಟೆಯ ಒಳಗೆ ಕೆಲ ನಟರ ಕಾರು, ನಟಿಯರ ಕಾರು ಅಪಘಾತಗಳು ಸಂಭವಿಸಿದ್ದವು. ಇದರಲ್ಲಿ ಒಬ್ಬಳು ಪ್ರಖ್ಯಾತ ನಟಿಯ ಕಾರಿನಲ್ಲಿ ಡ್ರಗ್ಸ್ ಪೆಡ್ಲರ್ ಇದ್ದ ಅನ್ನುವ ಸುದ್ದಿಯೂ ಪ್ರಚಾರದಲ್ಲಿತ್ತು.
ಈಗ ಡ್ರಗ್ಸ್ ಮಾಫಿಯಾದ ಕಿಂಗ್‌ಪಿನ್‌ಗಳು ಸಿಕ್ಕಿಬಿದ್ದಿದ್ದಾರೆ. ಇವರನ್ನು ಸರಿಯಾಗಿ ವಿಚಾರಣೆ ನಡೆಸಿದರೇ ಈ ಎಲ್ಲಾ ಅನುಮಾನಗಳಿಗೂ ಉತ್ತರ ಸಿಗುವ ಸಾಧ್ಯತೆಯಿದೆ. ಸಾವು,ಅಫಘಾತಗಳಿಗೆ ಡ್ರಗ್ಸ್ ಕಾರಣನೋ ಇಲ್ಲವೋ ಗೊತ್ತಿಲ್ಲ, ಆದರೆ ಜನರ ಈ ಎಲ್ಲಾ ಅನುಮಾನಗಳಿಗೆ ಪೊಲೀಸ್ ಅಧಿಕಾರಿಗಳ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.