ಬೆಂಗಳೂರು-ಕೊರೊನಾದ ಆರ್ಭಟ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನೆಯಲ್ಲೇ ಜೋರಾಗಿದೆ. ನಿನ್ನೆಯಷ್ಟೇ ಸಚಿವ ಸುಧಾಕರ್ ಅವರ 82 ವರ್ಷದ ತಂದೆಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಇದರಿಂದಾಗಿ ಕುಟುಂಬ ಸದಸ್ಯರನ್ನು ಚೆಕ್ ಮಾಡಿಸಿದ್ರು. ಈಗ ಸುಧಾಕರ್ ಅವರ ಪತ್ನಿ ಮತ್ತು ಮಗಳಿಗೂ ಕೂಡ ಕೊರೊನಾ ಇರೋದು ಧೃಡಪಟ್ಟಿದೆ.

ಸಚಿವರ ಕುಟುಂಬದಲ್ಲಿ ಈಗಾಗ್ಲೇ ಆತಂಕ ಮನೆ ಮಾಡಿದೆ. ಅಡುಗೆ ಸಿಬ್ಬಂದಿಯಿಂದ ತಂದೆಗೆ, ಅಲ್ಲಿಂದ ಮಡದಿ ಹಾಗೂ ಮಗಳಿಗೆ ಕೊರೊನಾ ಸೋಂಕು ಹರಡಿರಬಹುದು ಎನ್ನಲಾಗಿದೆ.ಸಚಿವ ಸುಧಾಕರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಪತ್ನಿ ಮತ್ತು ಮಗಳು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೇ ಸ್ವತಃ ಸಚಿವರು ಹಾಗೂ ಅವರ ಇಬ್ಬರು ಗಂಡು ಮಕ್ಕಳು ಕೂಡ ಟೆಸ್ಟ್ ಮಾಡಿಸಿದ್ದರು. ಅವರಿಗೆ ನೆಗೆಟಿವ್ ಬಂದಿದೆ ಅಂತ ಹೇಳಿಕೊಂಡಿದ್ದಾರೆ.
ಕುಟುಂಬದ ಒಳಿತಿಗೆ ಪ್ರಾರ್ಥಿಸಿದ ಶುಭಕೋರಿದವರಿಗೆ ನಾನು ಆಭಾರಿಯಾಗಿದ್ದೇನೆಂದು ಸಚಿವರು ಬರೆದುಕೊಂಡಿದ್ದಾರೆ.