ಬೆಂಗಳೂರು:ಕರ್ನಾಟಕ ಚಲನಚಿತ್ರ ದಿಗ್ಗಜರ ಡಬ್ಬಿಂಗ್ ವಿರುದ್ಧದ ಹೋರಾಟಗಳು ಸೋತಿವೆ. ಡಬ್ಬಿಂಗ್ ಮಾಡುವವರು ಗೆದ್ದಾಗಿದೆ.ಈಗ ಸಾಲು ಸಾಲು ಧಾರವಾಹಿಗಳು, ಚಲನಚಿತ್ರಗಳು ಟಿವಿ ಪರದೆಯಲ್ಲಿ ಪ್ರಸಾರವೂ ಆಗುತ್ತಿದೆ. ಈಗ ಇತ್ತೀಚೆಗೆ ಅನುಮಾನಸ್ಪಾದವಾಗಿ ನಿಧನರಾಗಿರುವ ಬಾಲಿವುಡ್ ಸ್ಟಾರ್ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ, ಭಾರತೀಯ ಕ್ರಿಕೆಟ್ ನ ಸೂಪರ್ ಸ್ಟಾರ್, ಚಾಂಪಿಯನ್ ಕ್ಯಾಪ್ಟನ್ ಧೋನಿಯ ಜೀವನಾಧಾರಿತ ಕಥೆಯನ್ನೊಳಗೊಂಡ ಚಿತ್ರ ಎಂ ಎಸ್ ಧೋನಿಯೂ ಕನ್ನಡಕ್ಕೆ ಡಬ್ಬಿಂಗ್ ಆಗಿದೆ.
ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಎಂ ಎಸ್ ಧೋನಿ ಚಲನಚಿತ್ರ ಪ್ರಸಾರವಾಗಲಿದೆ. ಧೋನಿಯ ಜೀವನವನ್ನು ಭಾರತೀಯರಿಗೆ ಬಹಳ ಅದ್ಭುತವಾಗಿ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮನೋಜ್ಞ ಅಭಿನಯದ ಮೂಲಕ ಕಟ್ಟಿಕೊಟ್ಟಿದ್ದರು. ಸುಶಾಂತ್ ಸಿಂಗ್ ರಜಪೂತ್ ಗೆ ಬಾಲಿವುಡ್ ನಲ್ಲಿ ಗಟ್ಟಿನೆಲೆ ಕಲ್ಪಿಸಿಕೊಟ್ಟ ಸಿನಿಮಾ, ಎಂ ಎಸ್ ಧೋನಿ.
ಸುಶಾಂತ್ ಸಿಂಗ್ ಅಭಿನಯಕ್ಕೆ ಇಡೀ ವಿಶ್ವವೇ ಬೆರಗಾಗಿತ್ತು. ಧೋನಿಯ ಬ್ಯಾಟಿಂಗ್ ಶೈಲಿ, ಮ್ಯಾನರಿಸಂ ಎಲ್ಲವನ್ನೂ ಅವರಂತೆಯೇ ಅಭಿನಯಿಸಿದರು.ಧೋನಿಯ ಹೆಲಿಕಾಪ್ಟರ್ ಶಾಟ್ಸ್ ಗಳನ್ನು ಕಲಿತುಕೊಂಡು ಅಭಿನಯಿಸಿದ್ರು. ಈಗ ಕನ್ನಡದಲ್ಲಿಯೂ ಈ ಚಿತ್ರ ಪ್ರಸಾರಕ್ಕೆ ಸಿದ್ದವಾಗಿರುವುದು ಧೋನಿಯ ಅಭಿಮಾನಿಗಳಿಗೆ ಮತ್ತು ಸುಶಾಂತ್ ಫ್ಯಾನ್ಸ್ ಗೆ ಖುಷಿ ನೀಡಿದೆ.