ಬೆಂಗಳೂರು-ಸೃಜಾ ಮತ್ತು ಗಜ ಇವರಿಬ್ಬರು ಪ್ರಾಣ ಸ್ನೇಹಿತರು. ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಜಾ ಖ್ಯಾತಿಯ ಸೃಜನ್ ಲೋಕೇಶ್ ಸದಾ ತಮ್ಮ ಫ್ರೆಂಡ್ ಶಿಪ್ ನ ಮೂಲಕ ಸುದ್ದಿಯಾಗುತ್ತಾರೆ.ಈಗ ಮತ್ತೆ ಗಜ ಸೃಜಾ ಬರ್ತ್ ಡೇಗೆ ಭರ್ಜರಿಯಾಗಿ ವಿಶ್ ಮಾಡಿ ಸುದ್ದಿಯಾಗಿದ್ದಾರೆ. ಆತ್ಮೀಯ ಗೆಳೆಯ ಸೃಜನ್ ಲೋಕೇಶ್ ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ. ಸಿನಿಮಾ, ಕಿರುತೆರೆ ಎರಡರಲ್ಲೂ ಕೂಡ ಮಿಂಚಿರುವ ಸೃಜಾ, ಅದ್ಭುತವಾದ ಡೈಲಾಗ್ ಡೆಲಿವರಿಗಳ ಮೂಲಕ ಮನೆ ಮಾತಾಗಿದ್ದಾರೆ.
ಪ್ರಾಣಸ್ನೇಹಿತನಿಗೆ ಗಜನಿಂದ ಸೂಪರ್ ವಿಶ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೃಜಾನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ ಸೃಜನ್,ನಿನ್ನ ಇಷ್ಟಾರ್ಥಗಳೆಲ್ಲ ಈಡೇರಲಿ ಅಂತ ದರ್ಶನ್ ಶುಭ ಹಾರೈಸಿದ್ದಾರೆ.

ಇದರ ಜೊತೆ ದರ್ಶನ್ ಎರಡು ಫೋಟೋ ಪೋಸ್ಟ್ ಮಾಡಿದ್ದಾರೆ. ಸೃಜನ್ ಮತ್ತು ದಚ್ಚು ಜೊತೆಗೆ ನಿಂತಿರುವ ಫೋಟೋ ಜೊತೆ, ಜೋಡೆತ್ತುಗಳನ್ನು ಹಿಡಿದಿರುವ ಫೋಟೋ ಗಮನ ಸೆಳೆಯುತ್ತಿದೆ.

ಸೃಜಾ ಕೂಡ ದರ್ಶನ್ ವಿಶ್ ಮಾಡಿರುವುದಕ್ಕೆ ಸೃಜಾ ಕೂಡ ಧನ್ಯವಾದ ಹೇಳಿದ್ದಾರೆ. ಸ್ಯಾಂಡಲ್ ವುಡ್ ನ ಹೀರೋಗಳಿಬ್ಬರ ಸ್ನೇಹ ಹೀಗೆ ಇರಲಿ, ದಿ ಇಂಡಿಯಾ ಕವರೇಜ್ ಕಡೆಯಿಂದಲೂ ಸೃಜನ್ ಗೆ ಹ್ಯಾಪಿ ಬರ್ತ್ ಡೇ ವಿಶ್ ಮಾಡೋಣ.