ಬೆಂಗಳೂರು : ದೇಶದ ಉಹಾನ್ ಎಂದೇ ಕುಖ್ಯಾತಿಗಳಿಸಿದ್ದ ವಾಣಿಜ್ಯ ನಗರಿ ಮುಂಬೈನನ್ನು ಬೆಂಗಳೂರು ಇದೀಗ ಓವರ್ ಟೇಕ್ ಮಾಡಿದೆ. ಕಳೆದ ಮೂರು ದಿನಗಳಿಂದ ಮುಂಬೈನಲ್ಲಿ ಬರ್ತಿರೋ ಪಾಸಿಟಿವ್ ಕೇಸ್ ಗಳಿಗಿಂತ ಬೆಂಗಳೂರಿನಲ್ಲಿ ಬರ್ತಿರೋ ಕೊರೋನಾ ಪಾಸಿಟಿವ್ ಕೇಸ್ ಹೆಚ್ಚಾಗಿದೆ. ಈಮೂಲಕ ಬೆಂಗಳೂರು ಅತ್ಯಂತ ಡೇಂಜರ ಝೋನ್ ಪ್ರವೇಶಿಸಿದೆ.
ಮುಂಬೈನಲ್ಲಿ ನಿನ್ನೆ ಒಂದೇ ದಿನ 1,263 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 92,720ಕ್ಕೆ ಏರಿದೆ. ಇನ್ನು 12-7-2020 ರಂದು ಒಂದೇ ದಿನ ಮುಂಬೈಲ್ಲಿ ಕೊರೋನಾ ಸೋಂಕಿಗೆ 44 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಮುಂಬೈನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಬರೊಬ್ಬರಿ 5,285ಕ್ಕೆ ಏರಿಕೆಯಾಗಿದೆ. ಹಾಗೇ ಒಂದೇದಿನ 1441 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು ಮುಂಬೈನಲ್ಲಿ ಕರೋನಾ ಗೆದ್ದವರ ಸಂಖ್ಯೆ 64,872ಕ್ಕೆ ಏರಿದೆ. ಸದ್ಯ ಒಟ್ಟು ಸಕ್ರೀಯ ಸೋಂಕಿರ ಸಂಖ್ಯೆ 22,556ರಷ್ಟಿದೆ.

ಇತ್ತ ಬೆಂಗಳೂರು ಮುಂಬೈ ಮಹಾನಗರಿಯನ್ನ ಹಿಂದಿಕ್ಕಿ ನಾಗಾಲೋಟದಲ್ಲಿ ಓಡಲಾರಂಭಿಸಿದೆ. ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ ಪಾಸಿಟಿವ್ ಬಂದ ಸಂಖ್ಯೆ 1525 ಆಗಿದೆ. ಹಾಗೇ ಒಂದೇ ದಿನ ಕೊರೋನಾಗೆ 45 ಮಂದಿ ಪ್ರಾಣತೆತ್ತಿದ್ದಾರೆ. ಈಮೂಲಕ ಬೆಂಗಳೂರು ದಿನದ ಸೋಂಕಿತರ ಸಂಖ್ಯೆಯಲ್ಲೂ ಮುಂಬೈನನ್ನು ಹಿಂದಿಕ್ಕಿದ್ದು ಸಾವಿನಲ್ಲೂ ವಾಣಿಜ್ಯನಗರಿಯನ್ನ ಓವರ್ ಟೇಕ್ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,387ಕ್ಕೆ ಏರಿದೆ. 4045 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೇ 14,067 ಮಂದಿ ಸಕ್ರೀಯ ಸೋಂಕಿತರಿದ್ದಾರೆ. ಇನ್ನು ನಗರದಲ್ಲಿ ಈವರೆಗೆ ಒಟ್ಟು 274 ಮಂದಿ ಕೊರೋನಾ ಮಹಾಮಾರಿಗೆ ಪ್ರಾಣತೆತ್ತಿದ್ದಾರೆ.


ಸದ್ಯ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ಮೀರಿ ಅಂಟಲಾರಂಭಿಸಿದೆ. ಸರ್ಕಾರ ಬುಧವಾರದಿಂದ ಒಂದುವಾರಗಳ ಕಾಲ ನಗರವನ್ನ ಲಾಕ್ ಮಾಡಲು ಆದೇಶಿಸಿದೆ. ಈಮೂಲಕ ಕೊರೋನಾ ಚೈನ್ ಲಿಂಕ್ ಬ್ರೇಕ್ ಮಾಡೋದು ಸರ್ಕಾರದ ಉದ್ದೇಶವಾಗಿದೆ. ಆದ್ರೆ ಹಳಿತಪ್ಪಿ ಓಡ್ತಿರೋ ಚೀನೀಮಹಾಮಾರಿಯನ್ನ ಒಂದುವಾರದ ಲಾಕ್ಡೌನ್ ಕಟ್ಟಿಹಾಕಲು ಯಶಸ್ವಿಯಾಗುತ್ತಾ ಅನ್ನೋದು ಈಗ ಎಲ್ಲರ ಮುಂದಿರೋ ಪ್ರಶ್ನೆಯಾಗಿದೆ.