ಬೆಂಗಳೂರು-ದೇಶದಲ್ಲಿ ಕೊರೊನಾದ ಆರ್ಭಟ ಮುಗಿಲು ಮುಟ್ಟಿರುವಾಗಲೇ ಬೆಂಗಳೂರಿನಲ್ಲೊಂದು ರಾಮಬಾಣ ಸಕ್ಸಸ್ ಆಗಿದೆ. ಭಾರತದ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದವೇ ಕೊರೊನಾ ವಿರುದ್ಧ ಹೋರಾಡಿ ಗೆದ್ದಿರುವ ಸುದ್ದಿ ಬಂದಿದೆ.
ವಿಕ್ಟೋರಿಯ ಆಸ್ಪತ್ರೆಯಲ್ಲಿ ಹತ್ತು ಮಂದಿ ಗುಣಮುಖ
ಆಯುರ್ವೇದ ಔಷಧಿಯಿಂದಾಗಿ ರೋಗಿಗಳು ಗುಣ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಆಯುರ್ವೇದ ವೈದ್ಯಕೀಯ ಪ್ರಯೋಗದಲ್ಲಿ ವೈದ್ಯರಿಗೆ ಯಶಸ್ಸು ಸಿಕ್ಕಿದೆ. ಕೊರೊನಾದ ವಿಶ್ವದಾದ್ಯಂತ ಮದ್ದಿನ ಸಂಶೋಧನೆ ನಡೆಯುತ್ತಿರುವಾಗಲೇ, ಆಯುರ್ವೇದ ತನ್ನ ತಾಕತ್ತನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಮೊದಲ ಹೆಜ್ಜೆಯಲ್ಲೇ ಯಶಕಂಡಿದೆ.
ವಿಕ್ಟೋರಿಗಿಯಾ ಆಸ್ಪತ್ರೆಯಲ್ಲಿ ಹತ್ತು ಮಂದಿ ಕೊರೊನಾ ಪೀಡಿತರಿಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿತ್ತು. ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆದಿದ್ದ ಖ್ಯಾತ ಆಯುರ್ವೇದ ವೈದ್ಯ ಗಿರಿಧರ ಕಜೆ ನೇತೃತ್ವದಲ್ಲಿ ರೋಗಿಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ರೋಗಿಗಳಿಗೆ ಜೂನ್ ಜೂನ್ 7 ರಿಂದಲೇ ಚಿಕಿತ್ಸೆ ಆರಂಭವಾಗಿದ್ದು, ಈ ಚಿಕಿತ್ಸೆಯಿಂದಲೇ ಕಂಪ್ಲೀಟ್ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

20ರಿಂದ 60 ವಯೋಮಿತಿಯವರಿಗೆ ಚಿಕಿತ್ಸೆ
ಕೊರೊನಾದ ಜೊತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳನ್ನು ಹೊಂದಿರುವ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. 20ರಿಂದ 63ರ ವಯೋಮಿತಿಯವರಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ತೊಂದರೆಗಳಿಲ್ಲದೇ 10 ದಿನದೊಳಗೆ ಗುಣಮುಖರಾಗಿದ್ದಾರೆ ಎನ್ನಲಾಗಿದೆ.
ಇತರೆ ರೋಗಿಗಳಿಗಿಂತ ಬೇಗ ಆಯುರ್ವೇದ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದಾರೆ ಅಂತನೂ ಸುದ್ದಿಯಿದೆ.
90ರಿಂದ 180 ರೂಪಾಯಿಯಲ್ಲಿ ಚಿಕಿತ್ಸೆ
ಆ ಚಿಕಿತ್ಸೆಯ ವೆಚ್ಚವೂ ಕೂಡ ಕಡಿಮೆಯಂತೆ, ಕೇವಲ 90ರಿಂದ 180 ರೂಪಾಯಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಗಿರಿಧರ್ ಕಜೆಯವರ ತಂಡದ ಈ ಪ್ರಯತ್ನ ಶ್ಲಾಘನೀಯ ಮತ್ತು ಕೊರೊನಾದ ವಿರುದ್ಧದ ಹೋರಾಟಗಾರರಿಗೆ ಒಂದು ಸಂಜೀವಿನಿ ಸಿಕ್ಕಂತಾಗಿದೆ.