ಬೀಜಿಂಗ್: ಇಡೀ ವಿಶ್ವಕ್ಕೆ ಹೆಮ್ಮಾರಿ ಕೊರೊನಾ ಎಂಬ ವೈರಸ್ ಅನ್ನು ಅಂಟಿಸಿದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದಿದೆ.. ಚೀನಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಈ ಕೊರೊನಾ ವೈರಸ್ ಕಡಿಮೆ ಉಷ್ಣಾಂಶದಲ್ಲಿ 20 ವರ್ಷಗಳ ಕಾಲ ಬದುಕುಬಲ್ಲದು ಎಂಬ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದೆ..
ಚೀನಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲಿ ಲಂಜುವಾನ್ ಹೇಳಿರುವ ಪ್ರಕಾರ, ಈ ಕೊರೊನಾ ವೈರಸ್ ಮೈನಸ್ 20 ಡಿಗ್ರಿ ಉಷ್ಣಾಂಶದಲ್ಲಿ ಸುಮಾರು 20 ವರ್ಷಗಳ ಕಾಲ ಬದುಕಬಲ್ಲದು ಎಂಬುವುದನ್ನು ಹೇಳಿದ್ದಾರೆ..ಕೊರೊನಾ ವೈರಸ್ ಮೈನಸ್ 4 ಡಿಗ್ರಿ ಉಷ್ಣಾಂಶದಲ್ಲಿ ಕೆಲ ತಿಂಗಳ ಕಾಲ ಬದುಕುತ್ತೆ.. ಆದ್ರೆ ಮೈನಸ್ 20 ಡಿಗ್ರಿಯಲ್ಲಿ ಇದು ಹೆಚ್ಚು ಸಮಯಗಳ ಕಾಲ ಬದುಕುತ್ತೆ ಅನ್ನೋದನ್ನು ಹೇಳಿದ್ದಾರೆ.. ಹೀಗಾಗಿ ಹಸಿ ಮಾಂಸ ಅಥವಾ ಮೀನನ್ನು ಮುಟ್ಟಬೇಡಿ ಎಂದು ಎಚ್ಚರಿಕೆ ನೀಡಿದೆ..
ಕೊರೊನಾ ವೈರಸ್ ತಂಪಿನ ಪ್ರದೇಶದಲ್ಲಿ ಹೆಚ್ಚು ಕಾಲ ಬದುಕುತ್ತದೆ..ಸಾಮಾನ್ಯವಾಗಿ ಮಾಂಸ ಹಾಗೂ ಮೀನುಗಳನ್ನು ಕೆಡದಂತೆ ಸಂಗ್ರಹಿಸಲು ಮೈನಸ್ ಡಿಗ್ರಿ ಉಷ್ಣಾಂಶವನ್ನು ಬಳಸಲಾಗುತ್ತದೆ.. ಒಂದು ವೇಳೆ ಕೊರೊನಾ ಸೋಂಕಿತ ವ್ಯಕ್ತಿ ಈ ಮಾಂಸ ಅಥವಾ ಮೀನುಗಳನ್ನು ಸಂಗ್ರಹಿಸುವಾಗ ಮುಟ್ಟಿದರೆ ಅದು ಅಲ್ಲೇ ಜೀವಂತವಾಗಿರುತ್ತೆ.. ಇದನ್ನು ಏನಾದರೂ ನಾವು ಮತ್ತೆ ಮುಟ್ಟಿದರೆ ನಮಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಚೀನಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲಿ ಲಂಜುವಾನ್ ಹೇಳಿದ್ದಾರೆ..