ಹೈದ್ರಾಬಾದ್: ರಾಮ್ ಗೋಪಾಲ್ ವರ್ಮ, ಸಕ್ಸಸ್ ಫುಲ್, ವಿಚಿತ್ರ, ವಿಭಿನ್ನ ನಿರ್ದೇಶಕ. ಇದೆಲ್ಲವೂ ಕೂಡ ಸತ್ಯ. ರಾಮ್ ಗೋಪಾಲ್ ವರ್ಮ ಮಾದಕತೆಯ ಹೀರೋಯಿನ್ ಗಳನ್ನು ಹುಡುಕುವುದರಲ್ಲಿ ಎತ್ತಿದ ಕೈ ಅಂತ ಹಲವು ಬಾರಿ ಜಗತ್ತಿಗೆ ಗೊತ್ತಾಗಿದೆ. ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನೇ ಹೋಲುವ ಮತ್ತೊಬ್ಬ ಹೀರೋನನ್ನು ಹುಡುಕಿದ್ದಾರೆ. ಇದರ ಜೊತೆಗೆ ಈಗ ತನ್ನ ವೆಬ್ ಸಿರೀಸ್ ಥ್ರಿಲ್ಲರ್ ಚಿತ್ರಕ್ಕೆ ಟಫ್ ಹೀರೋನನ್ನು ಹುಡುಕಿದ್ದಾರೆ.


ಒಡಿಸ್ಸಾದ ರಾಕಿ ಅನ್ನೋ ಹುಡುಗನನ್ನು ವರ್ಮ ಆಯ್ಕೆ ಮಾಡಿದ್ದಾರೆ. ಹಾಟ್ ಕೇಕ್ ತಿಂದೇ ಬಿಟ್ನಾ ಟಫ್ ಟಗರು! ರಾಮ್ ಗೋಪಾಲ್ ವರ್ಮರ ಥ್ರಿಲ್ಲರ್ ಚಿತ್ರದಲ್ಲಿ ನೇಕೆಡ್ ವೆಬ್ ಚಿತ್ರಕ್ಕಿಂತಲೂ ಹೆಚ್ಚು ಹಸಿಬಿಸಿ ದೃಶ್ಯಗಳಿರುವುದು ಪಕ್ಕಾ ಆಗಿದೆ. ಯಾಕಂದ್ರೆ, ಈಗಾಗ್ಲೇ ಒಡಿಸ್ಸಾದ ಮಾದಕತೆಯ ಹೊಸ ಸಾಮ್ರಾಜ್ಞಿ ಆಗೋದಕ್ಕೆ ಬಂದಿರುವ ಒಡಿಸ್ಸಾದ ಹಾಟ್ ಕೇಕ್ ಅಪ್ಸರಾ ರಾಣಿ ಹಾಗೂ ಒಡಿಸ್ಸಾದಿಂದಲೇ ವರ್ಮ ಹುಡುಕಿರುವ ರಾಕಿಯ ಫೋಟೋ ಶೂಟ್ ಮುಗಿದಿದೆ. ಬಟ್ಟೆಯ ತುಣುಕುಗಳೇ ಕಾಣದಂತೆ ಫೋಟೋವನ್ನು ಈಗಾಗ್ಲೇ ಬಿಡುಗಡೆ ಮಾಡಲಾಗಿದೆ. ಅಪ್ಸರಾ ರಾಣಿಯ ಹಾಟ್ ಕೇಕನ್ನು ಕಚ್ಚಿ ಕಚ್ಚಿ ನಾನು ತಿನ್ನಲಾ ಅನ್ನೋ ರೀತಿಯಲ್ಲಿ ರಾಕಿ ಕಾಣಿಸಿಕೊಂಡಿದ್ದಾರೆ. ಈ ಯುವ ಜೋಡಿಯ ಹಸಿಬಿಸಿ ಚಿತ್ರಗಳೇ ಇವತ್ತಿನ ಬಿಗ್ ಹೈಲೈಟ್ಸ್.

