ಬೆಂಗಳೂರು-ವಿವಿಧ ಟಿವಿ , ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಇಂದು ವಿಧಿವಶರಾಗಿದ್ದಾರೆ. ರಾಜ್ಯದ ವಿವಿಧ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ನಾಗರಾಜ ದೀಕ್ಷಿತ್, ಟಿವಿ 9ನಲ್ಲಿ ಇನ್ ಪುಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬಹುಕಾಲದಿಂದ ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಹೀಗಿರುವಾಗಲೇ ನಾಗರಾಜ ದೀಕ್ಷಿತ್ ಅವರಿಗೆ ಗುರುವಾರ ತಡರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಧಿವಶರಾಗಿದ್ದಾರೆ. ಈ ವೇಳೆ ಬೆಂಗಳೂರಿನ ಕೆಲ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದೆ ಎನ್ನಲಾಗಿದೆ.ಇದರಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ನಾಗರಾಜ್ ದೀಕ್ಷಿತ್ ವಿಧಿವಶರಾಗಿದ್ದಾರೆ ಎನ್ನಲಾಗಿದೆ.
ನಾಗರಾಜ್ ದೀಕ್ಷಿತ್ ಒಬ್ಬ ಬರಹಗಾರ, ತಮ್ಮ ವಾಯ್ಸ್ ಓವರ್ ಮೂಲಕವೂ ಜನರಿಗೆ ಚಿರಪರಿಚಿತರಾಗಿದ್ದರು. ಜೊತೆಗೆ ಇವರು ರಂಗ ಸಂಸ್ಕೃತಿ ಸೇರಿದಂತೆ ಹಲವು ನಾಟಕ ತಂಡಗಳ ಸಕ್ರೀಯ ಸದಸ್ಯನಾಗಿದ್ರು. ನಾಟಕ ರಂಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ರು.