ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ದಂಧೆ ದೊಡ್ಡ ಸಂಚಲನ ಹುಟ್ಟುಹಾಕಿದೆ. ಮಾದಕ ವಸ್ತುಗಳ ಸೇವನೆ, ಮಾರಾಟಗಳಲ್ಲಿ ಸ್ಯಾಂಡಲ್‌ವುಡ್ ಲಿಂಕ್ ಇದೆ ಅನ್ನೋದು ಸುದ್ದಿಯಾದ ಬೆನ್ನಲ್ಲೇ ಪ್ರಮುಖ ನಟ ನಟಿಯರು ಭಾಗಿಯಾಗಿದ್ದಾರೆ ಅಂತ ವರದಿಗಳು ಬರುತ್ತಿವೆ.
ರಾಗಿಣಿ, ಸಂಜನಾ ಮೇಲೆ ಆರೋಪ ನಿಜನಾ?
ಈಗಾಗ್ಲೇ , ಡ್ರಗ್ಸ್ ಲಿಂಕ್ ಹೊಂದಿದ್ದಾರೋ ಇಲ್ಲವೋ, ಆದರೂ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ರಾಜ್ಯದಾದ್ಯಂತ ಈ ಸುದ್ದಿ ಸಂಚಲನ ಹುಟ್ಟುಹಾಕಿದೆ. ಅಲ್ಲಿಗೆ ಜನರಿಗೆ ಸಿನಿಮಾನಟಿಯರ ಮೇಲೆ ಅನುಮಾನಗಳು ಜಾಸ್ತಿಯಾಗುತ್ತಿವೆ. ಆದರೆ, ಸಿಸಿಬಿ ತನಿಖೆ ನಡೆಸುತ್ತಿರುವ ಕೇಸ್‌ಗಳಲ್ಲಿ ಹೀರೋಯಿನ್‌ಗಳ ಹೆಸರು ಬಂದರೆ ಕೇಸ್ ಕ್ಲೋಸ್ ಆಗುತ್ತಾ ಅನ್ನೋ ಭಯನೂ ಆವರಿಸಿದೆ.
ಏನಾಯ್ತು ಕೆಪಿಎಲ್ ಹನಿಟ್ರ್ಯಾಪ್ ಕೇಸ್ ?
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲಾಗಿದೆ. ಇದರಲ್ಲಿ ಕೆಲ ಆಟಗಾರರು ಅರೆಸ್ಟ್ ಕೂಡ ಆದರು. ಹೀಗಿರುವಾಗಲೇ, ಪೊಲೀಸ್ ಅಧಿಕಾರಿಗಳೇ ಬಿಚ್ಚಿಟ್ಟ ಸುದ್ದಿಯಂದ್ರೆ, ಆಟಗಾರರನ್ನು ಹನಿಟ್ರ್ಯಾಪ್ ಮೂಲಕ ಫಿಕ್ಸಿಂಗ್ ಬೆಟ್ಟಿಂಗ್ ನಡೆಸಲು ಪ್ರೇರೇಪಿಸುತ್ತಿದ್ದರು. ಮಾನಿನಿಯರ ಮೂಲಕ ಆಟಗಾರರನ್ನು ಬಲೆಗೆ ಬೀಳಿಸಿಕೊಂಡು, ನಂತರ ಬ್ಲ್ಯಾಕ್ ಮೇಲ್ ಮಾಡ್ತಿದ್ರು ಅನ್ನುವ ಆರೋಪಗಳು ಕೇಳಿಬಂತು. ನಟಿಯರು, ಚಿಯರ್ ಲೀಡರ್ಸ್ ಮೂಲಕ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಅಂತನೂ ಆರೋಪಿಸಿದರು. ಆದರೆ, ಆ ನಂತರ ಈ ಕೇಸ್ ಏನಾಯ್ತು? ಹನಿಟ್ರ್ಯಾಪ್ ಮಾಡಿದ ನಟಿಯರು ಯಾರು? ಅವರ ಬಂಧನವಾಯ್ತಾ? ಅವರ ವಿಚಾರಣೆ ಆಯ್ತಾ? ಚಿಯರ್ ಲೀಡರ್ಸ್ ಹನಿಟ್ರ್ಯಾಪ್ ನಡೆಸಿದ್ದರೇ, ಅವರದ್ದಾದರೂ ಬಂಧನವಾಯ್ತಾ? ಇದೆಲ್ಲ ಪ್ರಶ್ನೆಗಳಿಗೆ ಸಿಸಿಬಿ ಉತ್ತರಿಸಲೇಬೇಕಿದೆ. ಈ ಪ್ರಶ್ನೆಗಳು ಉದ್ಭವಿಸಲು ಒಂದು ಕಾರಣವಿದೆ, ಈಗ ಡ್ರಗ್ಸ್ ದಂಧೆಯಲ್ಲೂ ಕೂಡ ಹೀರೋಯಿನ್‌ಗಳು, ಮಾಡೆಲ್‌ಗಳು ಭಾಗಿಯಾಗಿದ್ದಾರೆ ಅನ್ನೋ ವಿಚಾರ ಬೆಳಕಿದೆ ಬಂದಿದೆ. ಇಲ್ಲೂ ಕೂಡ ಡ್ರಗ್ಸ್ ಕಿಂಗ್ ಪಿನ್‌ಗಳ ಅರೆಸ್ಟ್ ಆಗಿದೆ.
ಹೀರೋಯಿನ್‌ಗಳ ಎಂಟ್ರಿಯಾದ್ರೆ ಸೈಲೆಂಟ್ ಆಗುವುದ್ಯಾಕೆ?
ಕೆಪಿಎಲ್ ಕೇಸ್ ಉದಾಹರಣೆಯಾಗಿ ತೆಗೆದುಕೊಂಡರೆ, ಫಿಕ್ಸಿಂಗ್,ಬೆಟ್ಟಿಂಗ್ ಅಂತ ಆಟಗಾರರನ್ನು ಬಂಧಿಸಿದ್ದರು. ಆದರೆ ಹನಿಟ್ರ್ಯಾಪ್ ವಿಚಾರದಲ್ಲಿ ಬಂಧನವಾಗಿಲ್ಲ. ಈಗ ಡ್ರಗ್ಸ್ ಕಿಂಗ್‌ಪಿನ್‌ಗಳ ಬಂಧನವಾಗಿದೆ, ನಟ ನಟಿಯರ ಬಂಧನವೂ ಆಗುತ್ತಾ? ಕಷ್ಟ ಅಂತಿದ್ದಾರೆ ಪಂಡಿತರು. ಯಾಕಂದ್ರೆ, ಈ ಜಾಲದಲ್ಲಿ ರಾಜಕಾರಣಿಗಳ ಮಕ್ಕಳ ಮೇಲೆಯೂ ಆರೋಪಗಳಿವೆ. ನಟಿಯರಿಗೂ ರಾಜಕಾರಣಿಗಳ ಮಕ್ಕಳಿಗೂ ಲಿಂಕ್ ಇರಬಹುದು. ಒಂದುವೇಳೆ, ನಟಿಯರು ಸಿಕ್ಕಿಹಾಕಿಕೊಂಡರೆ, ರಾಜಕೀಯದಲ್ಲಿ ಪಕ್ಷಾತೀತವಾಗಿ ಹಲವರ ಮುಖವಾಡ ಬಯಲಾಗುವ ಸಾಧ್ಯತೆಯಿದೆ. ಆದ್ರಿಂದ, ಈ ಕೇಸ್‌ನಲ್ಲಿ ಅವರಿವರ ಬಂಧನವಾಗುತ್ತೆ ಅಂತ ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ ಅನ್ನಿಸುತ್ತೆ. ಇದನ್ನೂ ಮೀರಿ, ಬಂಧನವಾಗಿ, ಎಲ್ಲರೂ ಸಿಕ್ಕಿಹಾಕಿಕೊಂಡರೇ ನಿಜಕ್ಕೂ ಗ್ರೇಟ್ ಅಂತ ಹೇಳಬಹುದು. ಕಾದು ನೋಡೋಣ ಏನಾಗುತ್ತೆ ಅಂತ.