ಚೀನಾ: ಕೊರೊನಾದಿಂದ ತತ್ತರಿಸಿ ಹೋಗಿರುವ ಚೀನಾ ಮತ್ತೊಂದು ರೋಗದ ಭಯದಲ್ಲಿದೆ. ಮಂಗೋಲಿಯಾದಲ್ಲಿ ಕಾಣಿಸಿಕೊಂಡಿರುವ ಬಬೋನಿಕ್ ಪ್ಲೇಗ್ ಬಗ್ಗೆ ಈಗ ಆತಂಕ ಹೆಚ್ಚಾಗಿದೆ. ಜ್ವರ, ತಲೆ ನೋವು ನೆಗಡಿಯ ರೂಪದಲ್ಲೇ ಆರಂಭವಾಗುವ, ಬ್ಯಾಕ್ಟೀರಿಯಾದಿಂದ ಬರುವ ರೋಗವೇ ಬಬೋನಿಕ್ ಪ್ಲೇಗ್.
ಮಂಗೋಲಿಯದಲ್ಲಿ ಹುಟ್ಟಿದೆ ಬಬೋನಿಕ್ ಪ್ಲೇಗ್
ಮಂಗೋಲಿಯಾದ ಬಯನ್ನೂರ್ ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ಬಬೋನಿಕ್ ಪ್ಲೇಗ್ ಕಾಣಿಸಿಕೊಂಡಿದೆ. ಇದರಿಂದಾಗಿ ಮಂಗೋಲಿಯಾದ ಸ್ಥಳೀಯ ಆರೋಗ್ಯ ಸಂಸ್ಥೆಗಳು 2020ರ ಕೊನೆಯವರೆಗೂ ಅಪಾಯವಿದೆ ಅಂತ ಎಚ್ಚರಿಸಿದ್ದಾರೆ. ಅಲ್ಲದೇ ಮಂಗೋಲಿಯಾದಲ್ಲಿ ಈ ರೋಗ ಹರಡುವ ಭೀತಿಯೂ ಎದುರಾಗಿದೆ.
ಮಾರ್ಮೋಟ್ ಗಳನ್ನು ತಿಂದವರಿಗೆ ರೋಗ
ವೆಸ್ಟರ್ನ್ ಮಂಗೋಲಿಯಾದ 27 ವರ್ಷದ ವ್ಯಕ್ತಿ ಮತ್ತು ಆತನ ಸಹೋದರ 17 ವರ್ಷದ ಬಾಲಕನಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇವರಿಬ್ಬರು ಕೂಡ ಕಾಡು ಪ್ರಾಣಿ ಮಾರ್ಮೋಟ್ ನ್ನು ತಿಂದಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಅಲ್ಲಿನ ಸ್ಥಳೀಯ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ಮಾರ್ಮೊಟ್ ಮಾಂಸವನ್ನು ತಿನ್ನಬೇಡಿ ಅಂತ ಆದೇಶವನ್ನು ನೀಡಿದೆ.
ಈ ಸಹೋದರರೊಂದಿಗೆ ಸಂಪರ್ಕದಲ್ಲಿರುವ 146 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಬೋನಿಕ್ ಪ್ಲೇಗ್ ನ ಲಕ್ಷಣ ಕಾಣಿಸಿಕೊಂಡರೇ ಕೂಡಲೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಸಿದೆ. ಇಲ್ಲವಾದರೇ, ಇದು ಯುವಕರನ್ನು ಕೂಡ ಕೇವಲ 24 ಗಂಟೆಯಲ್ಲೇ ಬಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಾರ್ಮೋಟ್ ಗಳ ಮಾಂಸ ಸೇವನೆಯಿಂದಲೇ ಈ ರೋಗ ಬಂದಿರುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ.