ಉಜಿರೆ: ಆ ಹಿರಿಯ ವ್ಯಕ್ತಿಗೆ ಅದೆನಾಯ್ತೋ ಗೊತ್ತಿಲ್ಲ, ಪ್ಯಾಕ್ ಮಾಡಿ ಇಟ್ಟಿದ್ದ ಹೋಳಿಗೆ ಕಂಡು ಬಾಯಲ್ಲಿ ನೀರು ಬಂತು ಅನ್ಸುತ್ತೆ. ಅದಕ್ಕೆ ಕ್ಯಾಷಿಯರ್ ಸ್ವಲ್ಪ ದೂರ ಹೋದ ಕೂಡಲೇ ಹೋಳಿಗೆ ಪ್ಯಾಕನ್ನೇ ಕಳ್ಳತನ ಮಾಡಿರುವ ಘಟನೆ ಉಜಿರೆಯಲ್ಲಿ ನಡೆದಿದೆ. ಇಲ್ಲಿನ ಕಾರಂತ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ.
ಆರಂಭದಲ್ಲಿ ಹೋಳಿಗೆಯ ಒಂದು ಪ್ಯಾಕನ್ನು ಜೇಬಿಗೆ ಹಾಕಿಕೊಳ್ಳಲು ಪ್ರಯತ್ನಿಸುವಾಗ ಕ್ಯಾಷಿಯರ್ ಬರುತ್ತಾರೆ. ಇದರಿಂದ ಬೆಚ್ಚಿದ ಆ ಗಿರಾಕಿ ಕೂಡಲೇ ಅದನ್ನು ಟೇಬಲ್ ಮೇಲಿಟ್ಟು ಕ್ಯಾಷಿಯರ್ ಜೊತೆ ಅದೆನೋ ಮಾತನಾಡುತ್ತಾರೆ. ಆ ನಂತರ ಪಕ್ಕದಲ್ಲೇ ಇದ್ದ ಮತ್ತೊಂದು ಹೋಳಿಗೆಯ ಪ್ಯಾಕೇಟನ್ನು ಜೇಬಿಗಿಳಿಸೋದಕ್ಕೆ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಾರೆ.
ಈ ಗಿರಾಕಿಗೆ ಹೋಳಿಗೆ ಮೇಲೆ ಇಷ್ಟೊಂದು ಆಸೆಯಾಗಲು ಕಾರಣವೇನು..ಇದು ಕಾಯಿ ಹೋಳಿಗೆಯೋ, ಕಡ್ಲೇ ಹೋಳಿಗೆಯೋ ಅನ್ನುವುದು ಇನ್ನೂ ಕೂಡ ತಿಳಿದುಬಂದಿಲ್ಲ. ಏನೇ ಆದರೂ ಇದನ್ನು ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ..ಯಾಕಂದ್ರೆ ಇದು ಹಸಿವಿನ ವಿಚಾರ..ಒಂದು ವೇಳೆ ಇವರು ಸಿಕ್ಕಿಹಾಕಿಕೊಂಡ್ರೆ ಇವರಿಗೆ ಕಾರಂತ್ ಹೊಟೇಲ್ ನವರು ಮತ್ತೊಂದೆರಡು ಪ್ಯಾಕ್ ಹೋಳಿಗೆ ನೀಡಿ ಕಳುಹಿಸಿದರೂ ಅಚ್ಚರಿಯಿಲ್ಲ.