ಬೆಂಗಳೂರು : 8 ತಿಂಗಳ ರಾಜಕೀಯ ಅಜ್ಞಾತವಾಸದ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರೋ ಎಟಿಬಿ ನಾಗರಾಜ್ ಮತ್ತೆ ತಾನು ಕುಬೇರನ ಮೊಮ್ಮಗ ಎಂದು ಘೋಷಿಸಿಕೊಂಡಿದ್ದಾರೆ. ಮೇಲ್ಮನೆ ಚುನಾವಣೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರೋ ಮಾಜಿ ಸಚಿವ ಎಂಟಿಬಿ ನಾಗರಾಜ್ ತಾನು 1,224 ಕೋಟಿಯ ಸರದಾರ ಎಂದು ಆಸ್ತಿ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ ಇಷ್ಟೊಂದು ದೊಡ್ಡ ಕುಬೇರನಾಗಿದ್ರೂ 52 ಕೋಟಿ ಸಾಲ ಹೊಂದಿರೋದಾಗಿ ಎಂಟಿಬಿ ತನ್ನ ಆಸ್ತಿವಿವರದಲ್ಲಿ ದಾಖಲಿಸಿದ್ದಾರೆ.

ಎಂಟಿಬಿ ಹೆಸರಿನಲ್ಲಿ 884 ಕೋಟಿ ರೂ ಮೊತ್ತದ ಆಸ್ತಿ ಇದ್ರೆ ಪತ್ನಿ ಹೆಸರಲ್ಲಿ 331 ಕೋಟಿ ರೂ ಮೌಲ್ಯದ ಆಸ್ತಿ ಇದೆ. ಇನ್ನು ಎಂಟಿಬಿ ನಾಗರಾಜ್ ಹೆಸರಲ್ಲಿ 461 ಕೋಟಿ ಚರಾಸ್ತಿ, ಹಾಗೂ 416 ಕೋಟಿ ಸ್ಥಿರಾಸ್ಥಿ ಇದೆ. ಪತ್ನಿ ಶಾಂತಾಕುಮರಿ ಬಳಿ 160 ಕೋಟಿ ಚರಾಸ್ತಿ ಹಾಗೂ 179 ಕೋಟಿ ಸ್ಥಿರಾಸ್ತಿ ಇದೆ ಎಂದು ಎಂಟಿಬಿ ಘೋಷಿಸಿಕೊಂಡಿದ್ದಾರೆ.
ಇದಿಷ್ಟು ಮಾತ್ರವಲ್ಲದೇ ವಜ್ರ, ಪ್ಲಾಟಿನಂ, ಸೇರಿ ಬರೊಬ್ಬರಿ 2.23 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಹಾಗೇ ಎಂಟಿಬಿ ಬಳಿ 32.60 ಲಕ್ಷ ರೂ ಹಗೂ ಪತ್ನಿ ಶಾಂತಕುಮಾರಿ ಬಳಿ 45.60 ಲಕ್ಷ ರೂ ನಗದು ಇದೆ ಎಂದು ಎಂಟಿಬಿ ಆಸ್ತಿವಿವರದಲ್ಲಿ ದಾಖಲಿಸಿದ್ದಾರೆ. ಜೊತೆಗೆ ಎಂಟಿಬಿ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ ಇದ್ದು ತನ್ನ ಹೆಸರಲ್ಲಿ 144.41 ಕೋಟಿ ರೂ ಪಿಕ್ಸೆಡ್ ಡೆಪಾಸಿಟ್ ಇದೆ ಎಂದು ಎಂಟಿಬಿ ಹೇಳಿಕೊಂಡಿದ್ದಾರೆ. ಹಾಗೇ ಎಂಟಿಬಿ ಪತ್ನಿ ಶಾಂತಾಕುಮಾರಿ ಸೇವಿಂಗ್ಸ್ ಅಕೌಂಟ್ ನಲ್ಲಿ 11.21 ಕೋಟಿ ರೂ ಹಾಗೂ ಫಿಕ್ಸೆಡ್ ಡೆಪಾಸಿಟ್ 34.08 ಕೋಟಿ ರೂ ಇದೆ.

ಇನ್ನು ಎಂಟಿಬಿ ಪಿತ್ರಾರ್ಜಿತ ಆಸ್ತಿ 6.21 ಕೋಟಿ, ಹಾಗೇ ಎಂಟಿಬಿ ತನ್ನ ಪುತ್ರ ಪುರುಷೋತ್ತಮ್ಗೆ 129 ಕೋಟಿ ಸಾಲ ನೀಡಿದ್ದಾರೆ. ಹಾಗೆ ಲ್ಯಾಂಡ್ ರೋವರ್, ಮರ್ಸಿಡೀಸ್ ಬೆಂಝ್, ಟೊಯೋಟಾ, ಹುಂಡೈ ಸೇರಿ ಹಲವು ಕಂಪನಿಗಳ ಐಷಾರಾಮಿ ಕಾರುಗಳಿದ್ದು ಇವುಗಳ ಒಟ್ಟು ಮೊಲ್ಯ 2.48 ಕೋಟಿ ರೂ ಗಳಾಗಿದೆ. ಪತ್ನಿ ಶಾಂತಾಕುಮಾರಿಬಳಿ ಏಕೈಕ ಪೋರ್ಶೆ ಕಾರು ಇದ್ದು ಇದರ ಬೆಲೆ ಬರೊಬ್ಬರಿ 1.72 ಕೋಟಿ ರೂ ಆಗಿದೆ. ಇದಿಷ್ಟು ಮಾತ್ರವಲ್ಲದೇ ಎಂಟಿಬಿ 54 ಎಕರೆ ಕೃಷಿ ಭೂಮಿ ಹೊಂದಿದ್ದು ಇದರ ಇಂದಿನ ಮಾರುಕಟ್ಟೆ ಮೌಲ್ಯ 29 ಕೋಟಿ 86 ಲಕ್ಷರೂ ಆಗಿದೆ. ಪತ್ನಿ ಹೆಸರಲ್ಲಿ 26 ಕೋಟಿ ಮೌಲ್ಯದ ಭೂಮಿ ಇದೆ.
ಇದರ ಜೊತೆಗೆ ಕೃಷಿಯೇತರ ಭೂಮಿ 64.66 ಲಕ್ಷ ಚದರ ಅಡಿ ಇದ್ದು ಇದರ ಇಂದಿನ ಮಾರುಕಟ್ಟೆ ಮೌಲ್ಯ308 ಕೋಟಿಯಾಗಿದೆ. ಪತ್ನಿಯ ಹೆಸರಿನಲ್ಲಿರೋ ಕೃಷಿಯೇತರ ಭೂಮಿಯ ಮೌಲ್ಯ 97.47 ಕೋಟಿ ರೂ ಆಗಿದೆ.ಹಾಗೇ ಎಂಟಿಬಿ ಬಳಿ 45 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡವೂ ಇದೆ. ಇನ್ನು ಎಂಟಿಬಿ 12 ಕೋಟಿ ಮೊತ್ತದ ಷೇರು ಹೊಂದಿದ್ರೆ ಪತ್ನಿ ಶಾಂತಾಕುಮಾರಿ 70 ಕೋಟಿ ಮೊತ್ತದ ಷೇರು ಹೊಂದಿದ್ದಾರೆ. ಹಾಗೇ ಎಂಟಿಬಿ ಮಾಡಿರೋ ಸಾಲ ಹಾಗೂ ಕೊಟ್ಟಿರುವ ಸಾಲದ ಮೊತ್ತವೇ 285 ಕೋಟಿಯಾಗಿದೆ. ಒಟ್ಟು ಎಂಟಿಬಿ ನಾಗರಾಜ್ ತಾನು 1,224 ಕೋಟಿಯ ಸರದಾರ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದಾರೆ.